ದಾವಣಗೆರೆ, ಜ.27- ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ’ಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಸ್.ದಿವಾಕರ್ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
25 ಜನವರಿ 1950ರಲ್ಲಿ ಚುನಾವಣಾ ಆಯೋಗವು ಸ್ಥಾಪನೆಯಾದ ದಿನವನ್ನು ರಾಷ್ಟ್ರೀಯ ಮತದಾನದ ದಿನವೆಂದು ಆಚರಿಸ ಲಾಗುತ್ತದೆ. 2011ರಲ್ಲಿ ಶ್ರೀಮತಿ ಪ್ರತಿಭಾ ಪಾಟೀಲರು ಅಂದಿನ ದಿನವನ್ನು ರಾಷ್ಟ್ರೀಯ ಮತದಾನದ ದಿನವನ್ನಾಗಿ ಆಚರಿಸಬೇಕೆಂದು ಕರೆ ನೀಡಿದ್ದರ ದ್ಯೋತಕವಾಗಿ 2011 ರಿಂದ ಈ ದಿನವನ್ನು ಆಚರಿಸಲಾ ಗುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರತಿಯೊಬ್ಬ ಭಾ ರತೀಯ ಪ್ರಜೆಯೂ ಮತದಾನದ ದಿನವನ್ನು ಒಂದು ಹಬ್ಬದ ರೀತಿ ಯಲ್ಲಿ ಆಚರಿಸ ಬೇಕೆಂದು ಹಾಗೂ ಯಾವುದೇ ರೀತಿಯ ಆಸೆ – ಆಮಿಷಗಳಿಗೆ ಒಳಗಾಗದೇ ಮತವನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದ ಯಶಸ್ಸು ಮತದಾನವನ್ನು ಅವಲಂಬಿಸಿದೆ ಹಾಗೂ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸುವುದರ ಮೂಲಕ ಪ್ರಜಾ ಪ್ರಭುತ್ವ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಇಡಿ ಪ್ರಶಿಕ್ಷಣಾ ರ್ಥಿಗಳಿಗೆ ಪ್ರಾಚಾರ್ಯರು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.