ಅರೆಮಜ್ಜಿಗೇರಿ : ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ

ಅರೆಮಜ್ಜಿಗೇರಿ : ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ

ಡೊಳ್ಳು – ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೂರ್ತಿಗಳ ಭವ್ಯ ಮೆರವಣಿಗೆ ಮೆರವಣಿಗೆಯಲ್ಲಿ ಕಳಸ ಹಿಡಿದು ಮಹಿಳೆಯರು ಮೆರುಗು ನೀಡಿದರು

ಹರಪನಹಳ್ಳಿ, ಜ.25- ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದ ಗ್ರಾಮ ದೇವತೆಗಳಾದ ಬಳ್ಳಾರಿ ದುರುಗಮ್ಮ, ಆದಿಶಕ್ತಿ ದುರುಗಮ್ಮ, ಮಾಯಮ್ಮ, ಮರಿಯಮ್ಮ ದೇವತೆಗಳ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮಂಗಳವಾರ ಮತ್ತು ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಆದಿಶಕ್ತಿ ದುರುಗಮ್ಮ, ಮಾಯಮ್ಮ, ಮರಿಯಮ್ಮ ದೇವರುಗಳ ನೂತನ ಮೂರ್ತಿಗಳಿಗೆ ದುಗ್ಗಾವತಿ ಚಿದಂಬರಂ ಭಟ್ ಅವರ ಸಮುಖದಲ್ಲಿ ಸಂಕಲ್ಪ, ಪುಣ್ಯಾಹವಾಚನ, ಗಣಪತಿ ಪೂಜೆ, ವಾಸ್ತು ಹೋಮ ನಡೆಯಿತು. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆಯೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಪ್ರತಿಷ್ಠಾಪನೆಯ ಪೂಜೆ ಕಾರ್ಯಕ್ರಮ ನೆರವೇರಿತು. ಬುಧವಾರ ಬಳ್ಳಾರಿ ದುರುಗಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು.

ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ನೂತನ ಮೂರ್ತಿಗಳನ್ನು ಗ್ರಾಮಕ್ಕೆ ಭವ್ಯ ಮೆರೆವಣಿಗೆ ಮೂಲಕ ಗ್ರಾಮಸ್ಥರು ಬರಮಾಡಿಕೊಂಡರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಮಹಿಳೆಯರು ಕಳಸ ಹಿಡಿದು ಸಾಗಿದ್ದು, ಮೆರವಣಿಗೆಗೆ ಮೆರುಗು ನೀಡಿದರು.

ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಶ್ರೀಗಳು ಬುಧವಾರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಹಲುವಾಗಲು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ ಮೂರ್ತಿ ಪ್ರತಿಷ್ಠಾಪನೆಗೆ ಆಗಮಿಸಿ, ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅರ್ಚಕರಾದ ಪಿ.ದೇವೇಂದ್ರಪ್ಪ, ಹೆಚ್.ದುರುಗೇಶಪ್ಪ, ದೇವಸ್ಥಾನಗಳ ಸೇವಾ ಸಮಿತಿ ಗೌರವಾಧ್ಯಕ್ಷ ಎ.ನಿಂಗಪ್ಪ, ಅಧ್ಯಕ್ಷ ಟಿ.ಬಸವರಾಜ, ಖಜಾಂಚಿ ಬಿ.ಗುಡ್ಡಪ್ಪ, ಉಪಾಧ್ಯಕ್ಷ ಪಿ.ಭರಮಪ್ಪ, ಪ್ರಧಾನ ಕಾರ್ಯದರ್ಶಿ ವಿ.ದುರುಗಪ್ಪ, ಆಲೂರು ಜ್ಯೋತೇಶ್, ಗಾಂಜಿ ನಿಂಗಪ್ಪ, ಕೆ.ರೇವಪ್ಪ, ಎಂ.ದಿಳ್ಯೆಪ್ಪ, ಎಚ್.ನಾಗೇಂದ್ರಪ್ಪ, ದುರುಗಪ್ಪ, ಎಚ್.ದೇವೇಂದ್ರಪ್ಪ, ವಿ.ಕರಿಯಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

error: Content is protected !!