`ಕಲಿಕಾ ಹಬ್ಬ’ದಿಂದ ಮಕ್ಕಳ ಪ್ರತಿಭೆ, ಶೈಕ್ಷಣಿಕ ಚಟುವಟಿಕೆ ಸುಧಾರಣೆ

`ಕಲಿಕಾ ಹಬ್ಬ’ದಿಂದ ಮಕ್ಕಳ ಪ್ರತಿಭೆ, ಶೈಕ್ಷಣಿಕ ಚಟುವಟಿಕೆ ಸುಧಾರಣೆ

ಎಲೆಬೇತೂರು : ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಅಭಿಮತ

ದಾವಣಗೆರೆ, ಜ. 25 – ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು. 

ಬಾಳೆಕಂಬ, ತಳಿರು ತೋರಣಗಳಿಂದ ಸಜ್ಜುಗೊಳಿಸಿದ ವೇದಿಕೆಗೆ ಅತಿಥಿಗಳನ್ನು ಶಾಲಾ ಬ್ಯಾಂಡ್‌ನೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕರೆತರುವುದರ ಮೂಲಕ ಹಬ್ಬದ ವಾತಾವರಣ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆರ್.ಹೆಚ್. ನಾಗರಾಜ್ ವಹಿಸಿದ್ದರು. ಉದ್ಘಾಟನೆಯನ್ನು ಕಲಿಕಾ ಹಬ್ಬದ ಸ್ವಾಗತ ಸಮಿತಿಯ ಹೆಚ್. ಬಸವರಾಜಪ್ಪ ದೀಪ ಬೆಳಗಿಸಿ ನೆರವೇರಿಸಿದರು. 

ಮುಖ್ಯ ಅತಿಥಿಯಾಗಿ  ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಅವರು ಮಾತನಾಡಿ, `ಕಲಿಕಾ ಹಬ್ಬ’ ಮಕ್ಕಳ ಪ್ರತಿಭೆ ಹಾಗೂ ಶೈಕ್ಷಣಿಕ ಚಟುವಟಿಕೆ ಸುಧಾರಣೆಗೆ ಮತ್ತೊಂದು ವೇದಿಕೆ. ಶಿಕ್ಷಕರು ಕ್ರಿಯಶೀಲರಾಗಿ ಭಾಗವಹಿಸಿ ಯಶಸ್ಸಿಗೆ ಶ್ರಮವಹಿಸಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಮಕ್ಕಳು ಪಡೆಯಲಿ ಎಂದು ಶುಭ ಹಾರೈಸಿದರು. ಸಿ.ಆರ್.ಪಿ. ಈರಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯೆ ರೇಣುಕಾ ಕರಿಬಸಪ್ಪ, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಪ್ರಭು, ತಾ.ಪಂ. ಮಾಜಿ ಸದಸ್ಯ ಬಿ.ಜಿ. ಸಂಗನಗೌಡ್ರು, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ವಿರುಪಾಕ್ಷಪ್ಪ, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಬಸನಗೌಡ್ರು, ಗ್ರಾ.ಪಂ. ಉಪಾಧ್ಯಕ್ಷೆ ಅಂಜಮ್ಮ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಪ್ರೇಮಾ, ಹೆಚ್. ಅಂಬಸಪ್ಪ, ಶಾಲಾ ಶಿಕ್ಷಣ ಪ್ರೇಮಿ ಎಂ.ಷಡಕ್ಷರಪ್ಪ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಎಸ್.ಕೆ. ಹಲಗಣ್ಣನವರ, ಬಿ.ಆರ್.ಪಿ. ಶೋಭಾ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ವಿಜ್ಞಾನ ಶಿಕ್ಷಕಿ ಅನ್ನಪೂರ್ಣ ಅತಿಥಿಗಳ ಒಂದು ಹಸ್ತದ ಗುರುತುಗಳನ್ನು ರಾಸಾಯನಿಕ ಚಟುವಟಿಕೆ ಮೂಲಕ ಪಡೆದುಕೊಂಡು ಮಕ್ಕಳಿಗೆ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಜಿ.ಎಂ. ವಾಣಿ, ಜೆ.ಟಿ. ಕವಿತಾ, ಎ.ಆರ್. ಗೋಪಾಲಪ್ಪ, ಗಣೇಶಯ್ಯ ಸಹಕರಿಸಿದರು.

ನಿರೂಪಣೆಯನ್ನು ಶಿಕ್ಷಕಿಯರಾದ ಜಿ.ಎನ್. ಸುಮಿತ್ರ, ಎನ್. ಗಂಗಮ್ಮ, ವಿದ್ಯಾರ್ಥಿಗಳಿಂದ ಪ್ರಾರ್ಥನೆ,
ಸ್ವಾಗತವನ್ನು ಮುಖ್ಯೋಪಾಧ್ಯಾಯರಾದ ಬಿ. ಸುಜಾತ, ವಂದನರ್ಪಣೆಯನ್ನು ಶಿಕ್ಷಕಿ ಟಿ.ಎಂ. ವಸಂತ ನೆರವೇರಿಸಿದರು.

error: Content is protected !!