ಉಪ ಕಸುಬುಗಳಿಂದ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯ

ಉಪ ಕಸುಬುಗಳಿಂದ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯ

ಕೋಟೆಮಲ್ಲೂರು ಹಾ.ಉ.ಸ.ಸಂಘದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ರೇಣುಕಾಚಾರ್ಯ

ಹೊನ್ನಾಳಿ,ಜ.24- ಕೃಷಿಯ ಉಪ ಕಸುಬುಗಳಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮ ದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆ, ಮೀನು ಕೃಷಿ, ಕುರಿ-ಕೋಳಿ ಸಾಕಾಣಿಕೆ ಸೇರಿದಂತೆ ವಿವಿಧ ಕಸುಬುಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಳಾಗಿದ್ದ ವೇಳೆ ಲೀಟರ್ ಹಾಲಿಗೆ ಎರಡು ರೂ.ಗಳ ಪ್ರೋತ್ಸಾಹ ಧನ ನೀಡಲು ಪ್ರಾರಂಭಿಸುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಿದರು. ಬಳಿಕ ಪ್ರೋತ್ಸಾಹ ಧನವನ್ನು ಐದು ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಇದರಿಂದಾಗಿ ಹೈನುಗಾರರ ಬದುಕು ಹಸನಾಯಿತು ಎಂದು ವಿವರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಹೈನುಗಾರಿಕೆಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೈನುಗಾರರಿಗೆ ಸರ್ಕಾರದ ಎಲ್ಲ ಸವಲತ್ತುಗಳು ದೊರಕಬೇಕು. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಶ್ರಮ ವಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬಿ. ಸಿದ್ಧಪ್ಪ ಮಾತನಾಡಿ, ಕೋಟೆಮಲ್ಲೂರು ಗ್ರಾಮಸ್ಥರು ವಿವಿಧ ಮೂಲಗಳಿಂದ ಹಣವನ್ನು ಕ್ರೋಢೀಕರಿಸಿಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಶ್ಲ್ಯಾಘನೀಯ ಎಂದು ತಿಳಿಸಿದರು.

ಗ್ರಾಮದ ಮುಖಂಡ  ಬಿ. ಮಹೇಶ್ವರಪ್ಪ,  ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ. ಮಂಜಪ್ಪ, ನಿರ್ದೇಶಕ ಕೆ. ರುದ್ರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ಸುರೇಶ್, ಹಾಲು ಪರೀಕ್ಷಕ ಕೆ.ಎನ್. ಹನುಮಂತಪ್ಪ, ಡಿ.ಎಸ್. ಚಂದ್ರಪ್ಪ, ನಾಗರಾಜ್, ನಾಗೇಶ್ವರ್, ಸಂಘದ ಮಾಜಿ ಕಾರ್ಯದರ್ಶಿ ಎಸ್.ಜಿ. ಬಾಳೆಲಿಂಗೇಶ್ವರ ಇತರರು ಮಾತನಾಡಿದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಹಾಪ್‍ಕಾಮ್ಸ್ ನಿರ್ದೇಶಕ ಅರಕೆರೆ ಎಸ್.ಜಿ. ಮಧುಗೌಡ, ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್,  ಗ್ರಾಪಂ ಅಧ್ಯಕ್ಷೆ ಮಂಜಮ್ಮ ಎನ್. ಸಿದ್ಧಪ್ಪ, ಉಪಾಧ್ಯಕ್ಷೆ ಶಾಂತಾಬಾಯಿ ಹನುಮಂತ ನಾಯ್ಕ, ಸದಸ್ಯರಾದ ಎ.ಕೆ. ಅಣ್ಣಪ್ಪ, ನಾಗರಾಜಪ್ಪ, ಕೆ.ಎನ್. ಹನುಮಂತಪ್ಪ, ಗೀತಾ ಮಹೇಶ್ವರಪ್ಪ,   ಸಹಕಾರ ಸಂಘದ ಉಪಾಧ್ಯಕ್ಷೆ ರೇಖಮ್ಮ ಎಸ್.ಜಿ. ಚಂದ್ರಶೇಖರಪ್ಪಗೌಡ್ರು, ನಿರ್ದೇಶಕರಾದ ಎ.ಕೆ. ರುದ್ರಪ್ಪ, ಎಚ್.ಕೆ. ನಾಗರಾಜ್, ಎಸ್.ವಿ. ರುದ್ರೇಶಪ್ಪ, ಆನಂದರಾವ್ ಘೋರ್ಪಡೆ, ಎಸ್.ಜಿ. ಹಾಲೇಶಪ್ಪ, ವಿ.ಎಂ. ಬೆನಕಯ್ಯಸ್ವಾಮಿ, ಕೆ. ಸಿದ್ಧೇಶ್, ಡಿ. ಶೇಖರಪ್ಪ, ರತ್ನಮ್ಮ, ಸಹಾಯಕ ಟಿ.ಜಿ. ಚನ್ನೇಶಪ್ಪಗೌಡ, ಮುಖಂಡರಾದ ಹನುಮಂತನಾಯ್ಕ, ಹನುಮಂತಪ್ಪ ಪೂಜಾರ್ ಇತರರು ಇದ್ದರು.

error: Content is protected !!