ರಾಣೇಬೆನ್ನೂರು ನಗರದ ಬಹು ನಿರೀಕ್ಷಿತ ಯೋಜನೆ ಕಳಪೆ: ನಗರಸಭೆ ಸದಸ್ಯರ ಧರಣಿ

ರಾಣೇಬೆನ್ನೂರು, ಸೆ.25- ಅಮೃತ ಸಿಟಿ ಯೋಜನೆಯಲ್ಲಿ ರೂ. 118 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ 24×7 ಕುಡಿಯುವ ನೀರಿನ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಕಳಪೆಯಾಗಿ ದ್ದನ್ನು ವಿರೋಧಿಸಿ, ಇಂದು ನಗರಸಭೆ ಸದಸ್ಯರು ಧರಣಿ ಪ್ರಾರಂಭಿಸಿದರು.

ಕಳೆದ ವಾರ ನಗರಸಭೆಯ ಎಲ್ಲ ಸದಸ್ಯರು ಸಹಿ ಮಾಡಿ ಕಾಮಗಾರಿ ಕಳಪೆಯಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಶಾಸಕರು, ಮಂತ್ರಿಗಳು, ಸಂಸದರು ಹಾಗೂ  ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯ, ಕೇಂದ್ರದ ಸಂ ಬಂಧಪಟ್ಟ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದರೂ ಸಹ ಕ್ರಮ ಕೈಗೊಳ್ಳದ್ದರಿಂದ ಧರಣಿ ಪ್ರಾರಂಭಿಸಲಾಯಿತು.  ಜಿಲ್ಲಾಧಿಕಾರಿಗಳು ಬಂದು ಸೂಕ್ತ ಕ್ರಮದ ಭರವಸೆ ನೀಡುವವರೆಗೆ ಧರಣಿ ನಡೆಯಲಿದೆ ಎಂದು ಸದಸ್ಯರು ತಿಳಿಸಿದರು.

ಕಾಂಗ್ರೆಸ್ ಹಾಗೂ ಕೆಪಿಜೆಪಿಯ ಸದಸ್ಯರಾದ ನೀಲಮ್ಮ ಮಾಕನೂರ,  ಶಶಿಧರ ಬಸೆನಾಯ್ಕ,  ಸುಮ ಹುಚ್ಚಗೊಂಡರ, ಜಯಶ್ರೀ ಪಿಸೆ, ಗಿರೀಶ ಸುರಳಿಕೇರಿ ಮಠ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಹುಚ್ಚಗೊಂಡರ, ಶೇಖರಪ್ಪ ಹೊಸಗೌಡ್ರ, ನಿಂಗರಾಜ ಕೋಡಿಹಳ್ಳಿ, ನಾಗರಾಜ ಪವಾರ, ನೂರುಲ್ಲಾ ಖಾಜಿ ಮತ್ತಿತರರು ಧರಣಿಯಲ್ಲಿದ್ದರು. ಕಳೆದ ವಾರದ ಮನವಿಗೆ ಸಹಿ ಮಾಡಿದ ಬಿಜೆಪಿ ಹಾಗೂ ಕೆಲ ಕೆಪಿಜೆಪಿ ಸದಸ್ಯರು ಧರಣಿಯಿಂದ ದೂರ ಉಳಿದರು.

ಸಿರಿಗೆರೆಯ ತರಳಬಾಳು ಬೃಹನ್ಮಠದ ಹಿರಿಯ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪುಣ್ಯತಿಥಿ ಸಂದರ್ಭದಲ್ಲಿ ಬೃಹನ್ಮಠದಲ್ಲಿರುವ ಶ್ರೀಗಳ ಪುತ್ಥಳಿಗೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು.

error: Content is protected !!