ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ

ಹರಪನಹಳ್ಳಿ, ಸೆ.25 – ಕೋವಿಡ್ ಸಂಕಷ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತಾಲ್ಲೂಕು ಪಂ ಚಾಯ್ತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮ ತದಿಂದ ನಿರ್ಣಯ ಕೈಗೊಳ್ಳಲಾಯಿತು. 

ಸದಸ್ಯ ಹುಣಸಿಹಳ್ಳಿ ಪ್ರಕಾಶ್ ಅವರು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವ ವಿಚಾರ ಪ್ರಸ್ತಾಪಿಸಿದಾಗ ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ವೆಂಕಟೇಶರೆಡ್ಡಿ, ಬಸವನಗೌಡ ಇತರರು ಧ್ವನಿಗೂಡಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ದಿ ವಿಚಾರಕ್ಕೆ ಬಂದಾಗ ಹರಪನಹಳ್ಳಿ ತಾಲ್ಲೂಕಿಗೆ ಮಲ ತಾಯಿ ಧೋರಣೆ ಯಾಗುತ್ತಲಿದೆ ಎಂದು ಚಿಗ ಟೇರಿ ಬಸವನಗೌಡ, ಮೈದೂರು ರಾಮಣ್ಣ, ಹುಣಿಸಿಹಳ್ಳಿ ಪ್ರಕಾಶ್, ವೆಂಕಟೇಶ ರೆಡ್ಡಿ, ಹುಲಿಕಟ್ಟಿ ಚಂದ್ರಪ್ಪ ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ನರೇಗಾ ಯೋಜನೆಯಲ್ಲಿ ನಮ್ಮ ಹೊಲ ನಮ್ಮ ದಾರಿ ಕೆಲಸಕ್ಕೆ ಹಣ ಕೊಡುತ್ತಾ ಇಲ್ಲ, ಕೇವಲ ಬದು ನಿರ್ಮಾಣ ಕೆಲಸ ಮಾಡಿ ಪ್ರಧಾನ ಮಂತ್ರಿಗಳ ಬಳಿ ಹೋಗಿ ಶಾಲು ಹಾಕಿಸಿಕೊಂಡು ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ದನದ ಕೊಟ್ಟಿಗೆ, ಕಣ, `ನಮ್ಮ ಹೊಲ ನಮ್ಮ ದಾರಿ, ಇಂತಹ ಕೆಲಸಗಳಿಗೆ ನರೇಗಾ ಯೋಜನೆ ಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅವರು ಜಿ.ಪಂ. ಅಧಿಕಾರಿಗಳನ್ನು ಆಗ್ರಹಿ ಸಿದರು. ಆಗ ತಾ.ಪಂ ಇಒ ಅನಂತರಾಜ ಅವರು ನಿಮ್ಮ ಬೇಡಿಕೆಗಳನ್ನು ನಿರ್ಣಯ ಮಾಡಿಕೊಂಡು ಜಿ.ಪಂ ಸಿಇಒ ಬಳಿ ತೆರಳಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಸೊಸೈಟಿಯಲ್ಲಿ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ವೆಂಕಟೇಶ ರೆಡ್ಡಿ, ಹುಲಿಕಟ್ಟಿ ಚಂದ್ರಪ್ಪ, ಬಸವನಗೌಡ, ಪ್ರಕಾಶ ದೂರಿದರು.

ಆಗ ಸಹಾಯಕ ಕೃಷಿ ನಿರ್ದೇಶಕ ಮಂಜು ನಾಥ ಗೊಂದಿ ಅವರು ದೂರು ಕೊಡಿ ಪರಿಶೀ ಲಿಸಿ  ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿ ದರು. ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ  ಎಂದು ಮೈದೂರು ರಾಮಣ್ಣ ಆರೋಪಿಸಿದರು. 

ಅರಣ್ಯ ಇಲಾಖೆಯಿಂದ ಸರ್ಕಾರದಿಂದ ಬರುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದಿಲ್ಲ ಎಂದು ಹಿರೇಮೇಗಳಗೆರೆ ಸದಸ್ಯ ಪಾಟೀಲ್  ಹಾಗೂ ಮೈದೂರು ಸದಸ್ಯ ರಾಮಣ್ಣ, ಪ್ರಕಾಶ, ಬಸವನಗೌಡ, ಹುಲಿಕಟ್ಟಿ ಚಂದ್ರಪ್ಪ ದೂರಿದರು.

ಕೋವಿಡ್ ಹೆಚ್ಚಳ ವಾಗುತ್ತಿರುವುದರಿಂದ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಚರಂಡಿ ಸ್ವಚ್ಚತೆ, ಬ್ಲಿಚೀಂಗ್ ಪೌಡರ್ ಸಿಂಪರಣೆ, ಅಗತ್ಯವಿದ್ದ ಕಡೆ ಫಾಗಿಂಗ್ ಸಿಂಪರಣೆ ಮಾಡಿಸಿ ಅದರ ಫೋಟೋ ಕಳಿಸಬೇಕು ಎಂದು ತಾ.ಪಂ ಇಒ ಅನಂತರಾಜ್ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಖ್ಯಾತ ಗಾಯಕ ಎಸ್ .ಪಿ. ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಿ ಸಂಲೇಪ ಸೂಚಿಸಲಾಯಿತು.

ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಪಾಟೀಲ್ ಕೆಂಚನಗೌಡ, ಇಓ ಅನಂತರಾಜ, ಯೋಜ ನಾಧಿಕಾರಿ ವಿಜಯಕುಮಾರ್ ಹಾಜರಿದ್ದರು.

error: Content is protected !!