ದಾವಣಗೆರೆ, ಸೆ.16- ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್ ವುಡ್ ಹಾಗೂ ರಾಜಕೀಯ ನಂಟು ಇದೆ ಎಂದು ಚಿತ್ರನಟ ಆಸೀಫ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡ್ರಗ್ ಮಾಫಿಯಾದಲ್ಲಿ ಈಗಾಗಲೇ ವಿಚಾರಣೆಗೆ ಒಳಪಟ್ಟಿರುವ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರು ಅಪ್ಪಟ ಸುಳ್ಳುಗಾರರು. ಸಂಜನಾ ಮೂಲತಃ ಹೆಸರು ಅರ್ಚನಾ. ಇವರು ಚಾಮರಾಜಪೇಟೆಯ ಸಣ್ಣ ಮನೆ ಯೊಂದರಲ್ಲಿ ವಾಸವಾಗಿದ್ದರು. ಈ ನಟಿಯರ ಹಿಂದೆ ರಾಜಕೀಯ ಹಾಗೂ ಸ್ಯಾಂಡಲ್ ವುಡ್ ನಂಟು ಸಹ ಇದೆ ಎಂದು ಅವರು ಆರೋಪಿಸಿದರು.
ಸಮಾಜದಲ್ಲಿ ಎಲ್ಲಾ ರಂಗಗಳಲ್ಲೂ ಒಳ್ಳೆಯದು ಹಾಗೂ ಕೆಟ್ಟದ್ದು ಇದೆ. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲೂ ಸಹ ಡ್ರಗ್ ಮಾಫಿಯಾ ಇರುವುದುಂಟು. ಇಲ್ಲಿ ಕೆಲವರು ಡ್ರಗ್ ಸೇವನೆ ಮತ್ತು ಮಾರಾಟ ಸಹ ನಡೆಸಲಾಗುತ್ತಿದೆ. ರಾಗಿಣಿ ಮತ್ತು ಸಂಜನಾಗೆ ಯಾವುದೇ ಭಯವಿಲ್ಲವೆಂದರು. ಸಾವಿರಾರು ಜನಕ್ಕೆ ಆಶ್ರಯ ನೀಡುವ ಚಿತ್ರರಂಗಕ್ಕೆ ಡ್ರಗ್ ಮಾಫಿಯಾ ಹೆಸರು ಹಾಳು ಮಾಡುತ್ತಿರುವುದು ಸರಿಯಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಯುವಪೀಳಿಗೆ ಡ್ರಗ್ ಮಾಫಿಯಾಕ್ಕೆ ಬಲಿಯಾಗುವುದು ತಪ್ಪಬೇಕು. ಇದಕ್ಕೆ ಎಲ್ಲರ ಸಹಕಾರ ಸಹ ಅಗತ್ಯ ಎಂದು ಹೇಳಿದರು.
ಚಿತ್ರನಟ ಶಿವಾಜಾ ಹೊಸಕೆರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.