ಜಿಲ್ಲೆಯಲ್ಲಿ ಇಂದು 209 ಪಾಸಿಟಿವ್, 85 ಗುಣಮುಖ  

ಜಿಲ್ಲೆಯಲ್ಲಿ ಇಂದು 209 ಪಾಸಿಟಿವ್, 85 ಗುಣಮುಖ   - Janathavani

ದಾವಣಗೆರೆ, ಸೆ.16- ಜಿಲ್ಲೆ ಯಲ್ಲಿ ಇಂದು 209 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 85 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಈ ದಿನ ದಾವಣಗೆರೆಯಲ್ಲಿ 114, ಹರಿಹರ 42, ಜಗಳೂರು 03,  ಚನ್ನಗಿರಿ 14, ಹೊನ್ನಾಳಿ 31, ಅಂತರ್ ಜಿಲ್ಲೆಯಿಂದ 05 ಸೇರಿದಂತೆ,  ಒಟ್ಟು 209 ಪ್ರಕರಣಗಳು ಇಂದು ವರದಿಯಾಗಿವೆ.

ಇಂದು ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆ 36, ಹರಿಹರ 09, ಜಗಳೂರು 06, ಚನ್ನಗಿರಿ 19, ಹೊನ್ನಾಳಿ 11, ಅಂತರ್ ಜಿಲ್ಲೆಯಿಂದ 04 ಒಟ್ಟು 85 ಮಂದಿ ಇಂದು ಬಿಡುಗಡೆಯಾಗಿದ್ದಾರೆ.

ಒಟ್ಟು 13,834 ಪ್ರಕರಣಗಳು ದಾಖಲಾಗಿದ್ದು 10,733 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ 227 ಸಾವು ಸಂಭವಿಸಿದ್ದು ಪ್ರಸ್ತುತ 2,874 ಸಕ್ರಿಯ ಪ್ರಕರಣಗಳು ಇವೆ.

ಮಲೇಬೆನ್ನೂರು : 39 ಪಾಸಿಟಿವ್

ಮಲೇಬೆನ್ನೂರು, ಹೋಬಳಿಯಲ್ಲಿ ಕಳೆದ 3 ದಿನಗಳಲ್ಲಿ 39 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಮವಾರ 8 ಜನರಿಗೆ, ಮಂಗಳವಾರ 16 ಜನರಿಗೆ ಮತ್ತು ಬುಧವಾರ 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬುಧವಾರ ಮಲೇಬೆನ್ನೂರಿನಲ್ಲಿ ಮೂವರಿಗೆ, ಹೊಳೆಸಿರಿಗೆರೆಯಲ್ಲಿ ಮೂವರಿಗೆ, ಹರಳಹಳ್ಳಿಯಲ್ಲಿ ಇಬ್ಬರಿಗೆ, ಹಾಲಿವಾಣ, ವಾಸನ, ಉಕ್ಕಡಗಾತ್ರಿ, ಕೊಕ್ಕನೂರು, ಮಲ್ಲನಾಯ್ಕನಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

error: Content is protected !!