ದಾವಣಗೆರೆ, ಸೆ.15- ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದ್ದು, ಇದು ಹೆಚ್ಚಲು ಸಂಸದ ಜಿ.ಎಂ. ಸಿದ್ದೇಶ್ವರ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಗಂಭೀರ ಆರೋಪ ಮಾಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾ ರ್ಜುನ್ ಹಾಗೂ ಅಂದಿನ ನಗರ ಪಾಲಿಕೆ ಆಯುಕ್ತ ನಾರಾಯಣಪ್ಪ ಅವರುಗಳಿಂದಾಗಿ ನಗರ ಪಾಲಿಕೆ ಮೊದಲ ಹಂತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಯಿತು. ಸಂಸದರು ದಾವಣಗೆರೆಯನ್ನು ನಾನೇ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಿ ಸಿದ್ದು ಎಂದು ಹೇಳುತ್ತಾ ಸ್ಮಾರ್ಟ್ ಸಿಟಿ ಯೋಜನೆಯಲ್ಲದೇ ಪ್ರತಿಯೊಂದು ಕಾಮ ಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರಿಗೆ ಬೆದರಿಕೆ ಹಾಕುತ್ತಿರು ವುದರಿಂದ ನಗರದ ಅನೇಕ ಕಾಮಗಾರಿಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಆಡಳಿತ ನಡೆಸುವವರು ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗಬೇಕು. ಆದರೆ, ಸಂಸದರು ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ಸಮಸ್ಯೆ ಆಲಿಸುವುದಿರಲಿ ತಮ್ಮದೇ ಪಕ್ಷದ ಶಾಸಕರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
7 ತಿಂಗಳ ನಂತರ ನಾಳೆ ದಿನಾಂಕ 16ರಂದು ಪಾಲಿಕೆ ಮೊದಲ ಸಾಮಾನ್ಯ ಸಭೆ ನಡೆಯಲಿದೆ. ಸಭೆಗೂ ಮುನ್ನ ದಾವಣಗೆರೆ ಮೇಯರ್ ಮತ್ತು ಆಯುಕ್ತರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಸಮಸ್ಯೆ ಬಗ್ಗೆ ದೂರಿದರೆ ಇಬ್ಬರೂ ಸರ್ವಾಧಿಕಾರಿ ಗಳಂತೆ ವರ್ತಿಸುತ್ತಿದ್ದಾರೆ. ಜನರಿಗೆ ಹಾಗೂ ಪಾಲಿಕೆ ಸದಸ್ಯರಿಗೆ ಸಹ ಮಾಹಿತಿ ನೀಡು ತ್ತಿಲ್ಲ. ಮೇಯರ್ ಹಾಗೂ ಆಯುಕ್ತರ ನಡುವೆ ಒಪ್ಪಂದ ಏರ್ಪಟ್ಟಂತಿದೆ. ಗುತ್ತಿಗೆದಾ ರರು ಮತ್ತು ಸಪ್ಲೈ ಮಾಡುವವರಿಂದ ಕಮೀ ಷನ್ ಪಡೆಯುತ್ತಿದ್ದಾರೆಂದು ಆಪಾದಿಸಿದರು.
ಬಿಎಸ್ವೈ ಬಿಟ್ಟು ಚುನಾವಣೆ ಎದುರಿಸಲಿ
ಕಾಂಗ್ರೆಸ್ ಪಕ್ಷಕ್ಕೆ ನಾಯಕರ ಕೊರತೆಯಿದೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಯವರು ಬಿ.ಎಸ್. ಯಡಿಯೂರಪ್ಪನವರನ್ನು ಬಿಟ್ಟು ಚುನಾವಣೆ ಎದುರಿಸಲಿ, ಬಲ ನೋಡೋಣ ಎಂದು ದಿನೇಶ್ ಕೆ. ಶೆಟ್ಟಿ ಸವಾಲು ಹಾಕಿದರು.
ಈ ಹಿಂದೆ ಮನಮೋಹನ್ ಸಿಂಗ್ ಆಡಳಿತದಲ್ಲಿ ಕೇಂದ್ರದಿಂದ ಅನುದಾನ ಬರುವಲ್ಲಿ ವಿಳಂಬವಾದಾಗ ಕೂಗಾಡಿದ ಸಚಿವ ಈಶ್ವರಪ್ಪನವರು ಇಂದು ಕೇಂದ್ರ ನಮ್ಮ ರಾಜ್ಯದ ಪಾಲಿನ ಜಿಎಸ್ ಟಿ ಹಣ ನೀಡದೇ ಇದ್ದರೂ ಸುಮ್ಮನಿದ್ದಾರೆ. ಧೈರ್ಯದಿಂದ ಮಾತನಾಡಿ ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲಿನ ತೆರಿಗೆಯನ್ನು ತರಲಿ ಎಂದರು.
ನಗರದ ಮೂಲಭೂತ ಸೌಲಭ್ಯಗಳತ್ತ ಗಮನಹರಿಸುತ್ತಿಲ್ಲ. 7 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಆ ನೀರೂ ಕೂಡ ಫಿಲ್ಟರ್ ಮಾಡದೇ ಕೊಳೆ ನೀರು ಸರಬರಾಜಾಗುತ್ತಿದ್ದು, ಜನರಿಗೆ ಚರ್ಮದ ರೋಗಗಳು ಹರಡುತ್ತಿದೆ. ಮೇಯರ್ ಇತ್ತ ಗಮನ ಹರಿಸಬೇಕು. ಈ ಹಿಂದೆ ಯಶವಂತ್ ರಾವ್ ಅವರು ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಅಕ್ರಮವಾಗಿ ಡೋರ್ ನಂಬರ್ ನೀಡಿ ದ್ದರು. ಈಗ ನಗರಾಭಿವೃದ್ದಿ ಇಲಾಖೆಯ ನಿಯಮದ ವಿರುದ್ದ ಡೋರ್ ನಂಬರ್ ನೀಡಿದರೆ ಲೋಕಾಯುಕ್ತ ಎಸಿಬಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಯೂಬ್ ಪೈಲ್ವಾನ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.