ಆಯುಷ್ ಕೋವಿಡ್ ಆಸ್ಪತ್ರೆಗೆ ಪ್ರಸ್ತಾವನೆ

ದಾವಣಗೆರೆ, ಸೆ. 11 – ಕೊರೊನಾ ಸೋಂಕಿ ತರಿಗೆ ಆಯುರ್ವೇದದ ಮೂಲಕ ಚಿಕಿತ್ಸೆ ನೀಡಲು ಆಯುಷ್ ಕೋವಿಡ್ ಸೆಂಟರ್‌ಗೆ ಪ್ರಸ್ತಾವನೆ ರೂಪಿಸಲಾಗುತ್ತಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಶಂಕರ ಗೌಡ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, 50 ಹಾಸಿಗೆಗಳ ಕೇಂದ್ರವೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳ ಒಪ್ಪಿಗೆ ಬೇಕಿದೆ. ಸ್ಥಾಪನೆಯಾದಲ್ಲಿ ಈ ಕೇಂದ್ರ ರಾಜ್ಯದಲ್ಲೇ ಮೊದಲ ಆಯುಷ್ ಕೋವಿಡ್ ಘಟಕವಾಗಲಿದೆ ಎಂದರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್ ಇಲಾಖೆಯು ಈಗಾಗಲೇ ಆಯುರ್ವೇದ ಶಿಷ್ಟಾಚಾರ ರೂಪಿಸಿದೆ. ಯೋಗ ಶಿಷ್ಟಾಚಾರವನ್ನೂ ಸಹ ರೂಪಿಸಲಾಗಿದೆ. ಇದನ್ನು ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಲಾಗು ವುದು ಎಂದವರು ಹೇಳಿದರು.

ಲಘು ಲಕ್ಷಣಗಳಿರುವ ಸೋಂಕಿತರಿ ಗೆ ಆಯುಷ್ ಕೊವಿಡ್ ಸೆಂಟರ್ ಮೂಲಕ ಚಿಕಿತ್ಸೆ ಕೊಡಿಸಬಹುದಾಗಿದೆ. ಈ ಆಯುರ್ವೇದ ಚಿಕಿತ್ಸಾ ಘಟಕ ದಾವಣಗೆರೆಯಲ್ಲೇ ಇರಬೇಕಿದೆ. ಈ ಘಟಕವು ಕೋವಿಡ್ ಆಸ್ಪತ್ರೆಗೆ ನಿಕಟವಾಗಿದ್ದರೆ, ಯಾರಾದರೂ ತೀವ್ರ ಅಸ್ವಸ್ಥಗೊಂಡರೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಬಹುದು ಎಂದವರು ವಿವರಿಸಿದರು.

 ಘಟಕಗಳ ನಿರ್ವಹಣೆಗಾಗಿ ಖಾಸಗಿ ಆಯುರ್ವೇದ ಕಾಲೇಜುಗಳ ವೈದ್ಯಕೀಯ ಸಿಬ್ಬಂದಿಯನ್ನೂ ಸಹ ಬಳಸಿಕೊಳ್ಳಬಹುದಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.ೊ ಕೊರೊನಾ ಸೋಂಕಿತರಿಗೆ ಆಯುಷ್ ಇಲಾಖೆಯ ಮೂಲಕ ರೋಗ ನಿರೋಧಕತೆ ಹೆಚ್ಚಿಸುವ ಬೂಸ್ಟರ್‌ಗಳನ್ನು ನೀಡಲಾಗುತ್ತಿದೆ. ಈ ದಾಸ್ತಾನು ಖಾಲಿಯಾಗಿದ್ದು, ಹೆಚ್ಚಿನ ದಾಸ್ತಾನಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಾ. ಗೌಡ ಹೇಳಿದರು.

error: Content is protected !!