ಬಾಪೂಜಿ ಆಸ್ಪತ್ರೆಯಲ್ಲಿ ಪರ್ಮನೆಂಟ್‌ ಡಯಾಲಿಸಿಸ್ ಕ್ಯಾಥೆಟರ್‌ ಚಿಕಿತ್ಸೆ

ಬಾಪೂಜಿ ಆಸ್ಪತ್ರೆಯಲ್ಲಿ ಪರ್ಮನೆಂಟ್‌ ಡಯಾಲಿಸಿಸ್ ಕ್ಯಾಥೆಟರ್‌ ಚಿಕಿತ್ಸೆ - Janathavani

ದಾವಣಗೆರೆ, ಸೆ. 8 – ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪರ್ಮನೆಂಟ್ ಹಿಮೋ ಡಯಾಲಿಸಿಸ್ ಕ್ಯಾಥೆಟರ್ ಅಳವಡಿಸಿ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಸಾಧಿಸಲಾಗಿದೆ.

ಮೂತ್ರಪಿಂಡ ಕಸಿ ಹಾಗೂ  ಸಲಹಾ ತಜ್ಞರಾದ ಡಾ. ಆರ್. ಮೋಹನ್ ಅವರ ನೇತೃತ್ವದಲ್ಲಿ ಕ್ಷ-ಕಿರಣ ತಜ್ಞ ಡಾ. ಡಿ.ದಿವಾಕರ್, ಡಾ. ಎನ್.ಎಸ್. ನವೀನ್ ಅವರನ್ನು ಒಳಗೊಂಡ ತಂಡವು ಬೆನ್ನುಹುರಿಯ ಹಾಗೂ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಈ ಚಿಕಿತ್ಸೆ ನೀಡಿದ್ದಾರೆ.

ಸಾಮಾನ್ಯವಾಗಿ ಈ ವಿಧಾನದಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು. ನಗರದಲ್ಲಿ ಈ ಚಿಕಿತ್ಸೆ ಇದುವರೆಗೆ ಲಭ್ಯವಿದ್ದಿಲ್ಲ. ಡಾಕ್ಟರ್  ಮೋಹನ್ ನೇತೃತ್ವದ ತಂಡವು ಈ ಸಾಧನೆ ಮಾಡಿದೆ.

ಸಾಮಾನ್ಯವಾಗಿ ಮೂತ್ರಪಿಂಡ ವೈಫಲ್ಯ ಹೊಂದಿರುವ ರೋಗಿಗಳಲ್ಲಿ ರಕ್ತ ಶುದ್ಧೀಕರಣ ಸರಿಯಾಗಿರುವುದಿಲ್ಲ. ಇಂತಹ ರೋಗಿಗಳಿಗೆ ತಾತ್ಕಾಲಿಕ ಹಾಗೂ ಶಾಶ್ವತ ಕ್ಯಾಥೆಟರ್‌ ಅಳವಡಿಕೆ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. 

ಎ.ವಿ. ಫಿಸ್ಟುಲಾ ಹಿಮೋ ಡಯಾಲಿಸಿಸ್ ಕ್ಯಾಥೆಟರ್‌ ಅಳವಡಿಕೆಯಲ್ಲಿ ರೋಗಿಗಳಿಗೆ ಒಂದು ಅಥವಾ ಒಂದೂವರೆ ತಿಂಗಳು ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ  ತೀವ್ರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಾದ ಸಂದರ್ಭದಲ್ಲಿ ಪರ್ಮನೆಂಟ್‌ ಕೆಥೆಟರ್ ಅಳವಡಿಸಿದ ತಕ್ಷಣವೇ ಹಿಮೋ ಡಯಾಲಿಸಿಸ್  ಚಿಕಿತ್ಸೆ ನೀಡಬಹುದಾಗಿದೆ.

ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳ ದೂರದೃಷ್ಟಿಯಿಂದ ನಗರದಲ್ಲಿ ಈ ರೀತಿಯ ಚಿಕಿತ್ಸೆ ಲಭ್ಯವಾಗಿದ್ದು, ಇದು ರೋಗಿಗಳಿಗೆ ಆಶಾಕಿರಣವಾಗಿದೆ ಎಂದು  ಡಾ. ಆರ್. ಮೋಹನ್ ತಿಳಿಸಿದ್ದಾರೆ.

error: Content is protected !!