ಕೃಷಿಕರಿಗಿಂತ ದಿನಗೂಲಿ, ಸ್ವಯಂ ಉದ್ಯೋಗಿಗಳಲ್ಲೇ ಆತ್ಮಹತ್ಯೆ ಹೆಚ್ಚು

ಕೃಷಿಕರಿಗಿಂತ ದಿನಗೂಲಿ, ಸ್ವಯಂ ಉದ್ಯೋಗಿಗಳಲ್ಲೇ ಆತ್ಮಹತ್ಯೆ ಹೆಚ್ಚು - Janathavaniನವದೆಹಲಿ, ಸೆ. 2 – ದಿನಗೂಲಿ ವಲಯದಲ್ಲಿರುವ 32,563 ಜನರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಒಟ್ಟು ಆತ್ಮಹತ್ಯೆಗಳಲ್ಲಿ ಇವರ ಪಾಲು ಅತಿ ಹೆಚ್ಚಿನ ಶೇ.23.4ರಷ್ಟಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ.) ಮಾಹಿತಿ ತಿಳಿಸಿದೆ.

2018ರಲ್ಲಿ ದಿನಗೂಲಿ ವಲಯದ 30,132 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅಂಕಿ ಅಂಶಗಳು ತಿಳಿಸಿವೆ. 

ಭಾರತದಲ್ಲಿ 2019ರಲ್ಲಿ ಒಟ್ಟಾರೆ 1,39,516 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿನಗೂಲಿ ನಂತರ ಅತಿ ಹೆಚ್ಚಿನ ಆತ್ಮಹತ್ಯೆ ಕಂಡು ಬಂದಿರುವುದು ಸ್ವಯಂ ಉದ್ಯೋಗಿಗಳಲ್ಲಿ. ಶೇ.11.6ರಷ್ಟು ಸ್ವಯಂ ಉದ್ಯೋಗಿಗಳು ಆತ್ಮಹತ್ಯೆಗೆ ಸಿಲುಕಿದ್ದಾರೆ. ಆತ್ಮಹತ್ಯೆಗಳಲ್ಲಿ ನಿರುದ್ಯೋಗಿಗಳ ಪಾಲು ಶೇ.10.1, ವೇತನದಾರರ ಪಾಲು ಶೇ.9.1, ಕೃಷಿ ವಲಯದಲ್ಲಿರುವವರ ಪಾಲು ಶೇ.7.4ರಷ್ಟಾಗಿದೆ. 

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.12.6ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. ಶೇ.3.7ರಷ್ಟು ಜನರು ಪದವೀಧರರಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

error: Content is protected !!