ವಿದ್ಯುತ್ ದೀಪ, ರಸ್ತೆ ದುರಸ್ತಿಗಾಗಿ ಪ್ರತಿಭಟನೆ

ವಿದ್ಯುತ್ ದೀಪ, ರಸ್ತೆ ದುರಸ್ತಿಗಾಗಿ ಪ್ರತಿಭಟನೆ - Janathavaniಹರಿಹರ, ಆ.27- ನಗರದ ಜಯಕರ್ನಾಟಕ ಸಂಘಟನೆ ಹರಿಹರ ತಾಲ್ಲೂಕು ಘಟಕದ ವತಿಯಿಂದ ವಿದ್ಯುತ್ ದೀಪ ದುರಸ್ತಿಪಡಿಸುವುದು ಹಾಗೂ ಹಳೆ ಪಿ.ಬಿ. ರಸ್ತೆಯ ಕೆಇಬಿಯಿಂದ ಹೊಸ ಸೇತುವೆವರೆಗೂ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ರವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಮುಖಂಡರು ನಗರದಲ್ಲಿ ಸುಗಮವಾಗಿ ವಾಹನಗಳು ಸಂಚಾರ ಮಾಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆ ಕಾಮಗಾರಿ ವಿಚಾರವನ್ನು ಹಲವಾರು ದಿನಗಳಿಂದ ಹೇಳುತ್ತಿದ್ದರೂ ಸಹ ಅಧಿಕಾರಿಗಳು ಗಮನ ಕೊಡುತ್ತಿಲ್ಲ. ಪ್ರತಿಭಟನೆ ಮಾಡಿದಾಗ ಬೇಗನೆ ಮಾಡುವುದಾಗಿ ಭರವಸೆ
ನೀಡುತ್ತಾರೆ. ಆದರೆ, ಇದುವರೆಗೆ ಅಭಿವೃದ್ಧಿಪಡಿಸದೆ ಹಾಗೆ ಬಾಕಿ ಉಳಿದುಕೊಂಡಿರುತ್ತದೆ‌. ಮಳೆ ಬಂದಾಗ ದೊಡ್ಡ ಕಾಲುವೆ ತರಹದಲ್ಲಿ ನೀರು ಇಲ್ಲಿ ಇರುವ ಗುಂಡಿಗಳಲ್ಲಿ ತುಂಬಿಕೊಂಡು
ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗಿ ಅನೇಕ ಅಪಘಾತಗಳಾಗಿ ಸಾವು – ನೋವುಗಳು ಸಂಭವಿಸಿವೆ. ಆದ್ದರಿಂದ ಆದಷ್ಟು ಬೇಗನೆ ಈ ರಸ್ತೆಯನ್ನು ದುರಸ್ತಿ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ಒಂದು ವೇಳೆ ಕಾನೂನಾತ್ಮಕ ತೊಂದರೆಗಳು ಇದ್ದಲ್ಲಿ ಬೃಹತ್ ವಾಹನಗಳಾದ ಬಸ್ಸು, ಲಾರಿ, ಟಿಪ್ಪರ್ ಇತ್ಯಾದಿ ವಾಹನಗಳನ್ನು ರದ್ದುಪಡಿಸಿ ಪ್ರಕರಣ ಇತ್ಯರ್ಥವಾಗುವವರೆಗೂ ಹಾಗೂ ಸೇತುವೆ ರಸ್ತೆ ಅನಾವರಣವಾಗುವವರೆಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಲಘು ವಾಹನಗಳಿಗೆ ಅನುಮತಿ ನೀಡಿ, ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ, ಉಪಾಧ್ಯಕ್ಷ ಶೇಖರಪ್ಪ ದೀಟೂರು, ಗುತ್ತೂರು ಕಾಲೋನಿ ಅಧ್ಯಕ್ಷ ಇರ್ಫಾನ್, ಕುಣೆಬೆಳಕೆರೆ ಅಧ್ಯಕ್ಷ ಚಂದ್ರಪ್ಪ ಮತ್ತು ಅಧ್ಯಕ್ಷ ಮಣಿ, ಭರತ್, ಸೋಮ, ಹರೀಶ್ ಗಾಂಧಿನಗರ ಅಧ್ಯಕ್ಷ ರಾಜು ಮತ್ತು ರಘು, ಬಸವರಾಜಪ್ಪ, ರಾಜಪ್ಪ, ಶಿವಯ್ಯ, ಸೋಮಣ್ಣ, ಅಂಜನಪ್ಪ, ಮಂಜು, ದೇವರಾಜ್, ವಾಗೀಶ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!