ಹರಿಹರ, ಆ.23- ಕೊರೊನಾ ರೋಗದ ಆತಂಕದಿಂದಾಗಿ ನಗರದಲ್ಲಿ ಈ ಬಾರಿ ಗಣೇಶೋತ್ಸವ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವುದರ ಮೂಲಕ ಬಹುತೇಕ ಗಣೇಶನನ್ನು ಒಂದೇ ದಿನದಲ್ಲಿ ವಿಸರ್ಜನೆ ಮಾಡಲಾಯಿತು.
ನಗರದ ಅನೇಕ ಬಡಾವಣೆಯಲ್ಲಿ ಪ್ರತಿವರ್ಷ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ, ಸರಿ ಸುಮಾರು ತಿಂಗಳುಗಟ್ಟಲೇ ಪೂಜೆ ಸಲ್ಲಿಸುತ್ತಾ, ಒಂದೊಂದು ದಿನ ಒಂದೊಂದು ರೀತಿಯಲ್ಲಿ ಮನರಂಜನಾ ಕಾರ್ಯಕ್ರಮ, ಕ್ರೀಡೆ, ಆರ್ಕೆಸ್ಟ್ರಾ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿ ನಂತರದಲ್ಲಿ ರಾಜ್ಯದ ಪ್ರತಿಷ್ಠಿತ ವಿವಿಧ ಕಲಾ ತಂಡಗಳನ್ನು ವಕರೆಸಿ, ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸಾರ್ವಜನಿಕರಲ್ಲಿ ಕೊರೊನಾ ರೋಗದ ಭಯವು ಹೆಚ್ಚಾಗಿ ಇರುವುದರಿಂದ ಗಣೇಶನನ್ನು ಪ್ರತಿಷ್ಟಿಸುವ ಸಂಘಟಕರು ಹೆಚ್ಚಿನ ದಿನ ಗಣೇಶನ ಹಬ್ಬವನ್ನು ಆಚರಣೆ ಮಾಡುವುದರಿಂದ ಹಿಂದೆ ಸರಿದು ಗಣೇಶನನ್ನು ಬೆಳಿಗ್ಗೆ ತಂದು ವಿಶೇಷ ರೀತಿಯ ಪೂಜೆ ಸಲ್ಲಿಸಿ, ಸಂಜೆ ನಗರದ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಿದರು.
ಪ್ರತಿಷ್ಠಿತ ಸಂಘಗಳಾದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗಾಂಧಿ ಮೈದಾನ, ನಡವಲಪೇಟೆ
ಬಸವೇಶ್ವರ ಯುವಕ ಸಂಘ, ಮರಾಠಲ್ಲಿ ವಿತ್ರವೃಂದ ಯುವಕ ಮಂಡಳಿ, ಶಿವಾ ಯುವಕ ಸಂಘ ಸೇರಿದಂತೆ 50ಕ್ಕೂ ಹೆಚ್ಚು ಪ್ರಮುಖ ಗಣೇಶನನ್ನು ಒಂದು ದಿವಸ ಪ್ರತಿಷ್ಟಾಪನೆ ಮಾಡಿ, ನಂತರದಲ್ಲಿ ಸಂಜೆ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಯೋಗಿಶ್ ಪಾಟೀಲ್, ಹೆಚ್. ನಿಜಗುಣ, ಶಂಕರ್ ಖಟಾವ್ಕಾರ್, ಜಿ.ಮುನಿಂದ್ರ, ಎಂ.ಬಿ.ಅಣ್ಣಪ್ಪ, ದತ್ತಾತ್ರೇಯ ನಾಡಿಗೇರ್, ಹೆಚ್.ಸಿ.ಕೀರ್ತಿಕುಮಾರ್, ಚಿದಾನಂದ ಕಂಚಿಕೇರಿ, ಎಸ್.ಬಿ. ವಿಜಯಕುಮಾರ್, ಮಂಜುನಾಥ್, ಪ್ರವಿಣ್ ಟಿಕೋಜಿರಾವ್, ಶಿವಾಜಿ, ಸಿ.ಎನ್.ಪ್ರಕಾಶ್, ನಿಂಗರಾಜ್, ಮಲ್ಲೇಶ್, ಮಧುಸೂದನ್, ಭಾರತ್, ಮಾರುತಿ, ಪರುಶುರಾಮ್, ಷಣ್ಮುಖ, ಬಸವರಾಜ್, ಲಕ್ಷಣ ಸಾ, ಶುಭಮ್, ಅನುಪ್, ಚಂದನ್ ಮೂರ್ಕಲ್, ದಿನೇಶ್, ಸಂತೋಷ್ ಗುಡಿಮನಿ, ಅಡಕಿ ಕುಮಾರ್, ಮಂಜು ರಟ್ಟಿಹಳ್ಳಿ, ರಾಘವೇಂದ್ರ, ರೇವಣಸಿದ್ದಪ್ಪ, ವಿಜಯಕುಮಾರ್, ಸುರೇಶ್ ಚಂದಾಪೂರ್, ಅಜಿತ್ ಸಾವಂತ್, ತುಳಜಪ್ಪ ಭೂತೆ ಇತರರು ಹಾಜರಿದ್ದರು.