ದಾವಣಗೆರೆ, ಆ.19- ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಪದಗಳು ದಿನಾಚರ ಣೆಗೆ ಸೀಮತವಾಗದೆ, ಕಾರ್ಯರೂಪಕ್ಕೆ ಬರಬೇ ಕೆಂದು ಹಿರಿಯ ವಕೀಲರೂ ಆಗಿರುವ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಡಿ.ಆರ್.ಆರ್ ವಿದ್ಯಾಸಂಸ್ಥೆಗಳ ಶಾಲೆ ಗಳ ಆಶ್ರಯದಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶ ಸ್ವತಂತ್ರವಾಗಿದೆ. ಆದರೆ, ಜನರು ಬಡತನ, ಭ್ರಷ್ಟಾಚಾರ, ಜಾತಿ ವಾದ ಮತ್ತು ಅಪರಾಧಗಳಿಂದ ಇನ್ನೂ ಮುಕ್ತರಾಗಿಲ್ಲ. ಅವುಗಳ ವಿರುದ್ಧ ಗಂಭೀರವಾದ ಹೋರಾಟದ ಅವಶ್ಯಕತೆ ಇದೆ. ಭ್ರಷ್ಟಾಚಾರ ಮತ್ತು ಉತ್ತಮ ಆಡಳಿತ ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಡಿ.ಆರ್.ಆರ್ ಶಾಲೆಗಳ ಆಡಳಿತಾಧಿಕಾರಿ ಎಂ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಹೇಮಾವತಿ ಜಿ.ಸಾವಳಗಿ, ಎಲ್.ತಿಪ್ಪೇಸ್ವಾಮಿ, ಸುವರ್ಣ ಸಿ.ಕಂಠಿ, ಆರ್.ಭೋಜರಾಜ್ ಯಾದವ್ ಮತ್ತು ಶಿಕ್ಷಕರಾದ ಕರಿಬಸಪ್ಪ, ಹಾಲೇಶ್ ಮತ್ತಿತರರು ಭಾಗವಹಿಸಿದ್ದರು.