ದಾವಣಗೆರೆ, ಆ.19- ಕಿಡ್ನಿ ವೈಫಲ್ಯಕ್ಕೆ ತುತ್ತಾಗುವ ರಾಜ್ಯ ಸರ್ಕಾರಿ ನೌಕರರು ಡಯಾಲಿಸಿಸ್ಗೆ ಒಳಪಡುವ ದಿನದಂದು ವಿಶೇಷ ಸಾಂದ ರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮನವಿ ಸಲ್ಲಿಸಲಾಗಿ ಸ್ಪಂದನೆ ನೀಡಿದ ಮುಖ್ಯಮಂತ್ರಿಗಳನ್ನು ಸರ್ಕಾರಿ ನೌಕರರ ಸಂಘವು ಅಭಿನಂದಿಸಿದೆ.
ನೌಕರರು ಅಧಿಕೃತ ವೈದ್ಯಕೀಯ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವ ಷರತ್ತಿನೊಂದಿಗೆ ಡಯಾಲಿಸಿಸ್ಗೆ ಒಳ ಪಡುವ ದಿನದಂದು ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಬಹು ದಾಗಿರುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದ್ದಾರೆ.