ದಾವಣಗೆರೆ, ಆ.19- ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ವತಿಯಿಂದ ಹರಿಹರದ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆಯನ್ನು ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು.
ಸಮಾಜದ ಹಿರಿಯರಾದ ಬಾದಾಮಿ ಕರಿಬಸಪ್ಪ, ಶ್ರೀಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಜಿಲ್ಲಾ ಘಟಕ ಅಧ್ಯಕ್ಷ ರಶ್ಮಿ ನಾಗರಾಜ್ ಕುಂಕೂದ್, ರಾಜ್ಯ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ವಸಂತ ಹುಲ್ಲತ್ತಿ, ವೀಣಾ ಕೊಟ್ರೇಶ್, ನಗರ ಘಟಕ ಅಧ್ಯಕ್ಷೆ ವಾಣಿ ಗುರು, ಹರಿಹರ ತಾಲ್ಲೂಕು ಮಹಿಳಾ ಅಧ್ಯಕ್ಷೆ ಸಂಗೀತ ಗಣೇಶ್ ಉಪಸ್ಥಿತರಿದ್ದರು.
ನಗರ ಘಟಕ ಕಾರ್ಯದರ್ಶಿ ಶಶಿಕಲಾ ಶಿವಲಿಂಗಪ್ಪ, ಕೊಟ್ರಮ್ಮ ಮುರುಗೇಶ್, ಶೈಲಾ, ಇಟ್ಟಿಗುಡಿ, ನಾಗವೇಣಿ ಪ್ರಕಾಶ್, ಶಾಂಭವಿ, ಕರಿಬಸಪ್ಪ ಗುತ್ತೂರು, ಕಾಶಿನಾಥ್, ಜಿ. ಷಣ್ಮುಖಪ್ಪ, ಬಂಕಾಪುರ ಶಿವಣ್ಣ ಉಪಸ್ಥಿತರಿದ್ದು, ಬಾಗಿನ ಕೊಡುಗೆಯನ್ನು ವಸಂತ ಅಂದನೂರು ಹಾಗೂ ಉಮಾ ಸೋಮಶೇಖರ್ ನೀಡಿದರು. ಚಿತ್ರದುರ್ಗ ಯುವ ಘಟಕದ ಬಿ.ಎಂ. ಮಂಜುನಾಥ್, ಬಣವಿಕಲ್ಲು ಆರ್.ಆರ್. ಅಭಿಷೇಕ್, ಎನ್.ಹೆಚ್. ಲಿಂಗರಾಜು ದೇವರಬೆಳಕೆರೆ ಮತ್ತಿತರರು ಭಾಗವಹಿಸಿದ್ದರು.