ದಾವಣಗೆರೆ, ಆ. 18- ಕೊರೊನಾ ಸಾಂಕ್ರಾಮಿಕ ರೋಗ ಸಮುದಾಯಕ್ಕೆ ಹರಡಿದ್ದು, ನಾಗರೀಕರು ನಿರ್ಲಕ್ಷ್ಯ ವಹಿಸದೇ ಸರ್ಕಾರಗಳು ಸೂಚಿಸಿರುವ ಕೋವಿಡ್-19 ಮಾರ್ಗಸೂಚಿಯನ್ನು ಎಲ್ಲಾ ನಾಗರಿಕರು ಪಾಲಿಸುವಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮನವಿ ಮಾಡಿದ್ದಾರೆ.
ಈಗಾಗಲೇ ಕೊರೊನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹರಡುತ್ತಿದ್ದು, ಆಡಳಿತ ಕೈಚೆಲ್ಲುವ ಮುನ್ನವೇ ನಾಗರೀಕರು ಜೀವನಕ್ಕಿಂತ ಜೀವ ಮುಖ್ಯ ಎಂಬುದನ್ನು ತಿಳಿದು ಹಾಗೂ ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದಿದ್ದ ಕೊರೊನಾ ಇಂದು ನಮ್ಮ ಮನೆ ಬಾಗಿಲಿಗೆ ಬಂದಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಬೇಕು. ಅನಾವಶ್ಯಕವಾಗಿ ಓಡಾಡದೇ ಅವಶ್ಯಕತೆ ಇರುವವರು ಮಾತ್ರ ತಮ್ಮ ಕೆಲಸಗಳಲ್ಲಿ ಭಾಗವಹಿಸಿ ಎಂದಿರುವ ಅವರು ಆದಷ್ಟು ನಾಗರೀಕರು ಮನೆಯಿಂದ ಹೊರಬರದೇ ಮನೆಯಲ್ಲಿರುವುದು ಕ್ಷೇಮ ಎಂದು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಮೃತರಾದ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಬೇಕಾಬಿಟ್ಟಿಯಾಗಿ ನೆರವೇರಿಸುತ್ತಾರೆಂದು ಅವರ ಕುಟುಂಬವರ್ಗದಲ್ಲಿ ಭಯಬೀತಿಯನ್ನುಂಟು ಮಾಡಿದ್ದು, ಜಿಲ್ಲಾಡಳಿತವು ಗೌರವಯುತವಾಗಿ ಅಂದರೆ ಮೃತ ಕುಟುಂಬ ವರ್ಗದವರಿಗೆ ಪಿಪಿಐ ಕಿಟ್ ಧರಿಸಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ವಿಧಿ-ವಿಧಾನಗಳನ್ನು ನೆರವೇರಿಸಲು ಅನುವು ಮಾಡಿಕೊಡಬೇಕೆಂದು ದಿನೇಶ್ ಆಗ್ರಹಿಸಿದ್ದಾರೆ.