ಐಸಿಎಆರ್‌ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಬೆಳೆ ಪ್ರಾತ್ಯಕ್ಷಿಕೆ

ದಾವಣಗೆರೆ, ಆ.16- ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಯೋಜನೆಯ ಗ್ರಾಮವಾದ ಅಗಸನಕಟ್ಟೆಯಲ್ಲಿ ತೊಗರಿಯಲ್ಲಿ ಕುಡಿ ಚಿವುಟುವುದನ್ನು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿ ಕೊಡಲಾಯಿತು. ಯಂತ್ರದ ಮುಖಾಂತರ ಕುಡಿಗಳನ್ನು ಚೀವುಟುವುದರಿಂದ ಅರೆ ಕೊಂಬುಗಳು ಜಾಸ್ತಿಯಾಗಿ ಇಳುವರಿಯು ಹೆಚ್ಚುತ್ತದೆ. 

ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬಹಳ ರೈತರು ಕುಡಿ ಚಿವುಟುವವುದನ್ನು ಮಾಡುವುದಿಲ್ಲ. ತೊಗರಿಯಲ್ಲಿ ಕುಡಿ ಚಿವುಟುವುದನ್ನು ಮಾಡಿದರೆ, ರೋಗ ಮತ್ತು ಕೀಟಗಳ ಬಾಧೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್‌ ತಿಳಿಸಿದರು. 

ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯಸ್ಥ ದೇವರಾಜ ಮಾತನಾಡಿ, ಹೊಸ ತಂತ್ರಜ್ಞಾನಗಳನ್ನು ರೈತರು ಬಳಸುವುದರಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಬಸವನಗೌಡ, ಹನುಮಂತಗೌಡ , ರಘುರಾಜ್ ಮತ್ತು ಪ್ರಗತಿಪರ ರೈತರು ಭಾಗವಹಿಸಿದ್ದರು.

error: Content is protected !!