ದಾವಣಗೆರೆ, ಆ. 12 – ತಮಗೆ ಏಪ್ರಿಲ್ , ಮೇ ತಿಂಗಳ ಲಾಕ್‌ಡೌನ್ ವೇತನ ಹಾಗೂ ಜೂನ್, ಜುಲೈ ತಿಂಗಳ ವೇತನ ಸೇರಿದಂತೆ ನಾಲ್ಕು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಗೊಳಿಸ ಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನಾ ಧರಣಿ – ಚಳುವಳಿ ನಡೆಸಿದರು.
ಜಿಲ್ಲಾಡಳಿತ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಕೆಲ ಕಾಲ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದರು. ನಂತರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ದೇಶಕ್ಕೆ ಆವರಿಸಿದ ಕೊವಿಡ್ -19 ಪರಿಣಾಮವಾಗಿ ಬಿಸಿಯೂಟ ತಯಾರಕರು ಸಂಕಷ್ಟ ಅನುಭವಿಸುವಂತಾಯಿತು. ಇತ್ತ ಶಾಲೆಗಳಲ್ಲಿ ಅಡುಗೆ ಕೆಲಸವೂ ಇಲ್ಲ ಅತ್ತ ಬೇರೆಕಡೆ ಕೂಲಿಯೂ ಇಲ್ಲದೇ ಟಿವಿಯೂಟ ತಯಾರಕರು ಪರಿತಪಿಸುತ್ತಿದ್ದಾರೆ. ಕೋವಿಡ್ -19 ರ ಲಾಕ್‌ಡೌನ್ ಪರಿಣಾಮವಾಗಿ ರಾಜ್ಯದ ಇತರ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಐದು ಸಾವಿರ ರೂ. ಪರಿಹಾರ ಹಣ ದೊರೆತು ಆ ಕಾರ್ಮಿಕರಿಗೆ ಅದು ಸಹಾಯವಾಯಿತು. ಅದರಂತೆ ಬಿಸಿಯೂಟ ತಯಾರಕರಿಗೂ ಲಾಸ್ಕನ್ ಪರಿಹಾರದ ಹಣ ದೊರೆತಿದ್ದರೆ ಅವರೂ ಎರಡೊತ್ತಿನ ಊಟ ಮಾಡಬಹುದಿತ್ತು. ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಯಾವುದೇ ಲಾಸ್ಸೌವ್ ಪರಿಹಾರ ಇಲ್ಲದೆ ವೇತನವೂ ಇಲ್ಲದೇ ಜೀವನ ನಡೆಸುವುದು ತುಂಬಾ ಕಷ್ಟವಾಗಿ ಬಿಸಿಯೂಟ ತಯಾರಕರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ . ಹಾಗಾಗಿ ಏಪ್ರಿಲ್ – ಮೇ ತಿಂಗಳ ಲಾಕ್‍ಡೌನ್ ಪರಿಹಾರವಾಗಿ ಮತ್ತು ಜೂನ್ – ಜುಲೈ ತಿಂಗಳ ವೇತನ ಸೇರಿದಂತೆ ನಾಲ್ಕು ತಿಂಗಳ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ರಾಜ್ಯ ಖಜಾಂಚಿ ಬೆಳಲಗೆರೆ ರುದ್ರಮ್ಮ, ಪ್ರಧಾನ ಕಾರ್ಯದರ್ಶಿ ಮಹಮದ್ ಬಾಷಾ, ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಲಕ್ಷ್ಮಿ, ಮಳಲ್ಕೆರೆ ಜಯಮ್ಮ, ಪ್ರಮೀಳಾ, ಲಲಿತಮ್ಮ, ಜಯಮ್ಮ, ಮಂಗಳಗೌರಿ, ಚನ್ನಮ್ಮ, ಸರೋಜ, ಸಿ. ರಮೇಶ, ಗದಿಗೇಶ ಪಾಳೇದ, ವನಜಾಕ್ಷಿ, ಅರುಣ, ಪದ್ಮಾ, ರಾಧಮ್ಮ, ಮಂಜುಳಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.