ಮಕ್ಕಳಿಗೆ ಸಿಗದ ರೇಷನ್ : ಅಂಗನವಾಡಿ ಕಾರ್ಯಕರ್ತೆಯರನ್ನು ವರ್ಗಾಯಿಸಲು ಆಗ್ರಹ

ರಾಣೇಬೆನ್ನೂರು, ಡಿ.25 – ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕೊಡಬೇಕಾದ ರೇಷನ್ನನ್ನು ಮನೆಗೆ ಒಯ್ಯುತ್ತಾರೆ. ಇವರು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇವ ರನ್ನು ವರ್ಗಾಯಿಸಿ ಬೇರೆ ಕಾರ್ಯಕರ್ತೆಯ ರನ್ನು ನೇಮಿಸಬೇಕೆಂದು ಒತ್ತಾಯಿಸಿ ತಾಲ್ಲೂ ಕಿನ ಹೊಸಚಂದಾಪುರ ಗ್ರಾಮಸ್ಥರು ಅಂಗನ ವಾಡಿಯಲ್ಲಿ ಇಂದು ಪ್ರತಿಭಟನೆ ಮಾಡಿದರು.

ಮಕ್ಕಳಿಗೆ ನೀಡಬೇಕಾದ ಆಹಾರ ಮತ್ತು ಕಾಳು ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳನ್ನು ಸರಿಯಾಗಿ ನೀಡುತ್ತಿಲ್ಲ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡಬೇಕಾದ ರೇಷನ್‍ನಲ್ಲಿ ತಾರತಮ್ಯ ಮಾಡುತ್ತಾರೆ. ಆಗಾಗ್ಗೆ ಇವರುಗಳು ಮನೆಗೆ ರೇಷನ್ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಸಮರ್ಪಕವಾಗಿ ಮಕ್ಕಳಿಗೆ ರೇಷನ್ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಧಾವಿಸಿದ ಅಂಗನವಾಡಿಯ ಅಸಿಸ್ಟೆಂಟ್ ಸಿಡಿಪಿಓ ಶೋಭಾ ಮತ್ತು ಶೋಭಾ ತಾಯಿ ಆಗಮಿಸಿ ಗ್ರಾಮಸ್ಥರ ಮನವೊಲಿಸಲು ಮುಂದಾದರು. ಇಂದು ನಿಮ್ಮ ಅಂಗನವಾಡಿಯ ಶಿಕ್ಷಕಿ ಮತ್ತು ಆಯಾ ಅವರುಗಳು ಮನೆಗೆ ಬೆಲ್ಲ ಸೇರಿದಂತೆ ಇತರೆ ದಿನಸಿ ಪದಾರ್ಥಗಳನ್ನು ಒಯ್ಯುವಾಗ ನಡು ರಸ್ತೆಯಲ್ಲಿಯೇ ಹಿಡಿದು ಇಲ್ಲಿ ಸೇರಿದ್ದೇವೆ. ಇವರು ದಿನಾಲು ಹೀಗೆ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ಬಾಲವಿಕಾಸ ಸಮಿತಿಯ ಒಂದು ಸಭೆ ಯನ್ನೂ ಕರೆಯದೇ ಮನ ಬಂದಂತೆ ರೆಕಾ ರ್ಡ್‍ಗಳನ್ನು ಸೃಷ್ಟಿಸುತ್ತಾರೆ. ಇವರು ನಮ್ಮ ಕೇಂದ್ರಕ್ಕೆ ಬೇಡ. ಕೂಡಲೇ ಇವರನ್ನು ಬೇರೆಡೆಗೆ ವರ್ಗಾಯಿಸಿ ನಮಗೆ ಬೇರೆ ಕಾರ್ಯಕರ್ತೆ ಯರನ್ನು ನೇಮಿಸಬೇಕು ಎಂದು ಪಟ್ಟು ಹಿಡಿದರು. ಸಿಡಿಪಿಒ ಶೋಭಾ ಮಾತನಾಡಿ, ಇಲ್ಲಿನ ಸಮಸ್ಯೆಗಳನ್ನು ಆಲಿಸಿರುವೆ. ಇವರ ದಾಖಲಾತಿಗಳನ್ನು ಪರಿಶೀಲಿಸಿರುವೆ. ಇದರ ಬಗ್ಗೆ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!