ಹರಪನಹಳ್ಳಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ
ಹರಪನಹಳ್ಳಿ, ಡಿ.23- ತಾಲ್ಲೂಕಿನ ಜೆ.ಎಂ.ಎಫ್.ಸಿ.ಯ ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‍ನಲ್ಲಿ ಹಿರಿಯ ಮತ್ತು ಕಿರಿಯ ನ್ಯಾಯಾಲಯಗಳಲ್ಲಿ ಒಟ್ಟು 43 ಲಕ್ಷ ರೂ. ಗಳನ್ನು ವಸೂಲಿ ಮಾಡಲಾಗಿದೆ. ಒಟ್ಟು ನ್ಯಾಯಾಲಯದ ಪೆಂಡಿಂಗ್ ಪ್ರಕರಣಗಳು 121 ರಲ್ಲಿ ರಾಜೀ ಸಂಧಾನ ಮಾಡಲಾಗಿದ್ದು, 38 ಪ್ರಕರಣಗಳ ಮೊತ್ತ 23.89 ಲಕ್ಷ ಮೊತ್ತದಿಂದ ಇತ್ಯರ್ಥ ಗೊಳಿಸಲಾಗಿದೆ. 41 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಲಘು ಪ್ರಕರಣ 49 ಇತ್ಯರ್ಥವಾಗಿದ್ದು, ಅದರ ಮೊತ್ತ ರೂ. 9800 ಇತ್ಯರ್ಥ ಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಮೋಟಾರು ವಾಹನಕ್ಕೆ ಸಂಬಂಧಿಸಿದ ಒಟ್ಟು 68 ಪ್ರಕರಣಗಳಲ್ಲಿ 10 ಪ್ರಕರಣಗಳು ಇತ್ಯರ್ಥವಾಗಿದ್ದು, 20.80 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಬ್ಯಾಂಕಿನ ವ್ಯಾಜ್ಯ ಪೂರ್ವ ಪ್ರಕರಣಗಳು 68ರಲ್ಲಿ 10 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದು, ಅದರ ಮೊತ್ತ 21.40 ಲಕ್ಷ ವಸೂಲಿ ಮಾಡಲಾಗಿದೆ.
ಸಾರ್ವಜನಿಕರು ನ್ಯಾಯಾಲಯದಲ್ಲಿ ನಡೆಯುವ ಉಚಿತ ಮೆಗಾ ಲೋಕ ಅದಾಲತ್‌ನಲ್ಲಿ ನಿಮ್ಮ ಮೇಲೆ ಇರುವ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಾರ್ವಜನಿಕರಿಗೆ ತಿಳಿಸಿದರು.
ಬ್ಯಾಂಕಿನಿಂದ ಸಾಲ ಪಡೆದಿರುವ ಸಾರ್ವಜನಿಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯಾಲಯದಿಂದ ಸಮನ್ಸ್ ನೋಟಿಸ್ ಕಳಿಸಿ ಸಾಲ ಇರುವ ಬ್ಯಾಂಕಿನ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡು ಸಂಬಂಧಪಟ್ಟ ಸಾಲಗಾರರಿಗೆ ನೋಟಿಸ್ ಕಳಿಸಿ ಅವರಿಗೆ ಲೋಕ ಅದಾಲತ್‍ನ ಮೂಲಕ ಇತ್ಯರ್ಥ ಪಡಿಸಿಕೊಳ್ಳುವುದಕ್ಕೆ ಸುವರ್ಣ ಅವಕಾಶವಿದೆ. ಸಾರ್ವಜನಿಕರು ಇಂತಹ ಉಚಿತವಾದ ಕಾನೂನಿನ ಸದುಪಯೋಗಪಡೆದುಕೊಂಡು ಪ್ರಕರಣದಿಂದ ಮುಕ್ತರಾಗಬೇಕು ಎಂದರು.
ಸಿವಿಲ್ ಕಿರಿಯ ನ್ಯಾಯಧೀಶರಾದ ಬಿ.ಜಿ.ಶೋಭಾ, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರಗೌಡ್ರು, ಉಪಾಧ್ಯಕ್ಷ ಟಿ. ವೆಂಕಟೇಶ್, ಕೆ. ಜಗದಪ್ಪ, ಪಿ.ರಾಮನಗೌಡ, ಗಂಗಾಧರ್ ಗುರುಮಠ್, ಕೆ.ಪ್ರಕಾಶ್, ಎಂ. ಮೃತ್ಯುಂಜಯ, ಕೆಂಗಳ್ಳಿ ಪ್ರಕಾಶ್, ಬಾಗಳಿ ಮಂಜುನಾಥ್, ವಾಮದೇವ್, ರೇವಣಸಿದ್ದಪ್ಪ, ಪ್ರಕಾಶ್‍ಗೌಡ, ಮಂಜ್ಯಾನಾಯ್ಕ, ಜಾಕೀರ್, ನಂದೀಶ್ ನಾಯ್ಕ, ಹಾಲೇಶ್, ಸಿದ್ದೇಶ್ ಮತ್ತು ತಾಲ್ಲೂಕಿನ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.