ಕೊರೊನಾ ಲಸಿಕೆಯಲ್ಲಿ ಹಂದಿಯ ಜಿಲಿಟನ್ ಬಳಕೆಗೆ ಇಂಡೋನೇಷಿಯಾದಲ್ಲಿ ಆಕ್ಷೇಪ

ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ಲಸಿಕೆ ಉತ್ಪಾದಿಸುವ ಕುರಿತು ಚರ್ಚೆ

ಜಕಾರ್ತಾ, ಡಿ. 20 – ಕೊರೊನಾ ಲಸಿಕೆ ಉತ್ಪಾದನೆಗಾಗಿ ವಿಶ್ವದಾದ್ಯಂತ ಕಂಪನಿಗಳು ಭರದಿಂದ ಪ್ರಯತ್ನ ನಡೆಸುತ್ತಿವೆ. ಮತ್ತೊಂದೆಡೆ ಈ ಲಸಿಕೆಗಳಲ್ಲಿ ಕೆಲ ಧರ್ಮೀಯರು ನಿಷೇಧಿಸಿರುವ ಹಂದಿಯ ಅಂಶಗಳಿರುವ ಬಗ್ಗೆಯೂ ಚರ್ಚೆಗಳು ನಡೆದಿವೆ.

ಹಂದಿಯಿಂದ ಮಾಡಿರುವ ಉತ್ಪನ್ನ ಗಳನ್ನು ಕೆಲ ಧರ್ಮೀಯರು ನಿಷೇಧಿಸಿ ದ್ದಾರೆ. ಹೀಗಾಗಿ ಮತೀಯ ಭಾವನೆಗಳಿಗೆ ಅನುಗುಣವಾಗಿ ಲಸಿಕೆ ಉತ್ಪಾದಿಸುವ ಬಗ್ಗೆ ಒತ್ತು ಇಂಡೋನೇಷಿಯಾದಲ್ಲಿ ನೀಡಲಾಗು ತ್ತಿದೆ. ಹಂದಿ ಉತ್ಪನ್ನಗಳನ್ನು ಲಸಿಕೆಯಲ್ಲಿ ಬಳಸುವುದೇ ಆದರೆ ಅದು ಲಸಿಕೆ ನೀಡುವು ದರ ಮೇಲೆ ಪರಿಣಾಮವಾಗುವ ಸಾಧ್ಯ ತೆಯ ಕಳವಳವೂ ಆ ದೇಶದಲ್ಲಿ ವ್ಯಕ್ತವಾಗುತ್ತಿದೆ. 

ಲಸಿಕೆಯನ್ನು ಸಂಗ್ರಹಿಸುವಾಗ ಹಾಗೂ ಸಾಗಿಸುವಾಗ ಸ್ಥಿರವಾಗಿರಲಿ ಎಂದು ಹಂದಿಯಿಂದ ಪಡೆಯಲಾದ ಜಿಲಿ ಟನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲ ದೇಶಗಳು ಸಾಕಷ್ಟು ವರ್ಷಗಳಿಂದ ಹಂದಿಯಿಂದ ಮುಕ್ತವಾದ ಲಸಿಕೆಯನ್ನು ಉತ್ಪಾದಿಸುವ ಪ್ರಯತ್ನದಲ್ಲೂ ತೊಡಗಿವೆ.

ಸ್ವಿಸ್ ಫಾರ್ಮಾ ಕಂಪನಿಯಾದ ನೊವಾರ್ಟಿಸ್ ಹಂದಿಯಿಂದ ಮುಕ್ತವಾದ ಮೆನಿಂಗಿಟಿಸ್ ಲಸಿಕೆಯನ್ನು ಉತ್ಪಾದಿಸಿದೆ. ಸೌದಿ ಅರೇಬಿಯಾ ಹಾಗೂ ಮಲೇಷಿಯಾ ಗಳಲ್ಲಿರುವ ಅಜ್ ಫಾರ್ಮಾ ಕಂಪನಿಯು ತನ್ನದೇ ಆದ ಪ್ರತ್ಯೇಕ ಲಸಿಕೆಯನ್ನೂ ಹೊಂದಿದೆ. ಆದರೆ, ಈಗಿರುವ ಪೂರೈಕೆ ಜಾಲ, ವೆಚ್ಚ ಹಾಗೂ ಲಸಿಕೆಯ ಅಲ್ಪ ಅವಧಿಯವರೆಗೆ ಮಾತ್ರ ಸಶಕ್ತವಾಗಿರುವ ಕಾರಣಗಳಿಂದಾಗಿ ಹಲವಾರು ವರ್ಷಗಳವ ರೆಗೆ ಬಹುತೇಕ ಲಸಿಕೆಗಳಲ್ಲಿ ಸ್ವರೂಪ ಬದ ಲಾಗುವ ಸಾಧ್ಯತೆ ಇಲ್ಲ ಎಂದು ಬ್ರಿಟಿಷ್ ಇಸ್ಲಾಮಿಕ್ ಮೆಡಿಕಲ್ ಅಸೋಸಿಯೇ ಷನ್‌ನ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ವಕಾರ್ ಹೇಳಿದ್ದಾರೆ. ಈ ನಡುವೆ ಹೇಳಿಕೆ ನೀಡಿರುವ ಫಿಜರ್, ಮೊಡೆರ್ನಾ ಹಾಗೂ ಅಸ್ಟ್ರಾಜೆನೆಕಾಗಳ ವಕ್ತಾರರು, ಕೊರೊನಾ ಲಸಿಕೆಯಲ್ಲಿ ಹಂದಿ ಉತ್ಪನ್ನಗಳಿಲ್ಲ. ಆದರೆ, ಬೇಡಿಕೆ ಹೆಚ್ಚಾಗಿರುವ ಕಾರಣದಿಂದಾಗಿ ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳು ಜಿಲಿಟನ್ ಮುಕ್ತ ಎಂಬ ಪ್ರಮಾಣ ಪತ್ರ ಹೊಂದಿರದ ಲಸಿಕೆಯನ್ನು ಪಡೆಯಲಿವೆ ಎಂದು ಹೇಳಿವೆ.

ಇದು ಯಹೂದಿ ಹಾಗೂ ಮುಸ್ಲಿಮ್ ವಿದ್ವಾಂಸರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹಂದಿಯ ಉತ್ಪನ್ನಗಳನ್ನು ಅಶುದ್ಧ ಎಂದು ಭಾವಿಸಲಾಗುತ್ತದೆ. ಅದೇ ವೇಳೆ ಔಷಧಗಳನ್ನು ಹೇಗೆ ನಿಷೇಧಿಸಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ ಎಂದು ವಕಾರ್ ತಿಳಿಸಿದ್ದಾರೆ.

ಹಂದಿಯ ಜಿಲಿಟನ್ ಸಾಕಷ್ಟು ರಸಾ ಯನಿಕ ಬದಲಾವಣೆಗೆ ಒಳಗಾಗಿರುತ್ತದೆ. ಹೀಗಿರುವಾಗ ಇದನ್ನು ಪಡೆಯುವುದು ಧಾರ್ಮಿಕವಾಗಿ ಅಶುದ್ಧ ಎಂದು ಪರಿಗಣಿಸ ಲಾಗದು ಎಂಬ ಅಭಿಪ್ರಾಯವೂ ಇದೆ. ಈ ಹಿಂದೆಯೂ ಹಂದಿಯ ಜಿಲಿಟನ್ ಬಳಕೆಗೆ ಅನುಮತಿ ಇದೆ ಎಂದು ಪರಿಗಣಿಸಲಾಗಿದೆ. ಲಸಿಕೆಯನ್ನು ಬಳಕೆ ಮಾಡದೇ ಹೋದರೆ ಹೆಚ್ಚು ಹಾನಿಯಾಗುತ್ತದೆ ಎಂದು ಯೂನಿ ವರ್ಸಿಟಿ ಆಫ್ ಸಿಡ್ನಿಯ ಉಪನ್ಯಾಸಕ ಡಾ. ಹರುನೊರ್ ರಶೀದ್ ಹೇಳಿದ್ದಾರೆ.

ಯಹೂದಿ ಕಾನೂನಿನ ಪ್ರಕಾರ ಹಂದಿಯ ಸೇವನೆ ಇಲ್ಲವೇ ಹಂದಿಯನ್ನು ನೈಸರ್ಗಿಕ ರೀತಿಯಲ್ಲಿ ಬಳಕೆ ಮಾಡುವುದರ ಮೇಲೆ ನಿಷೇಧವಿದೆ. ಚುಚ್ಚುಮದ್ದಾಗಿ ದೇಹಕ್ಕೆ ನೀಡುವುದು ನೇರವಾಗಿ ತಿಂದಂತೆ ಅಲ್ಲ. ಜನರು ಅನಾರೋಗ್ಯಪೀಡಿತರಾದಾಗ ಈ ಪ್ರಶ್ನೆಗಳು ಬರುವುದಿಲ್ಲ ಎಂದು ಇಸ್ರೇಲ್‌ನ ರಬ್ಬಿಗಳ ಒಕ್ಕೂಟ ಜೋಹರ್ ಅಧ್ಯಕ್ಷರಾಗಿರುವ ರಬ್ಬಿ ಡೇವಿಡ್ ಸ್ಟಾವ್ ಹೇಳಿದ್ದಾರೆ.

ಇಂಡೋನೇಷಿಯಾದ ಉಲೋಮಾ ಕೌನ್ಸಿಲ್ ಯಾವ ವಸ್ತುಗಳಿಗೆ ಇಸ್ಲಾಮಿಕ್ ಕಾನೂನಿನಲ್ಲಿ ಅವಕಾಶ ಇದೆ ಎಂದು ಪರಿಗಣಿಸಿ §ಹಲಾಲ್¬ ಎಂಬ ಪ್ರಮಾಣ ಪತ್ರ ನೀಡುತ್ತದೆ. 2018ರಲ್ಲಿ ಈ ಮಂಡಳಿಯು ಜಿಲಿಟನ್ ಇರುವ ದಡಾರದ ಲಸಿಕೆಗಳನ್ನು ನೀಡಬಾರದು ಎಂದು ಕರೆ ನೀಡಿತ್ತು. ನಂತರದಲ್ಲಿ ಇಂಡೋನೇಷಿಯಾ ದಲ್ಲಿ ದಡಾರದ ಪ್ರಮಾಣ ವಿಶ್ವದಲ್ಲೇ ಮೂರನೇ ಅತಿ ಹೆಚ್ಚಿನ ಮಟ್ಟಕ್ಕೆ ಬಂದಿತ್ತು ಎಂದು ಆರೋಗ್ಯ ಸಂಶೋಧನಾ ಸಂಘಟ ನೆಯಾದ ರೀಸರ್ಚ್ ಪಾರ್ಟ್ನರ್‌ಶಿಪ್ ಸಂಘಟನೆಯ ನಿರ್ದೇಶಕ ರಚೆಲ್ ಹೊವಾರ್ಡ್ ತಿಳಿಸಿದ್ದಾರೆ. ನಂತರದಲ್ಲಿ ಇಂಡೋನೇಷಿಯಾ ಲಸಿಕೆ ಕಡ್ಡಾಯ ಗೊಳಿಸಲು ಕ್ರಮ ತೆಗೆದುಕೊಂಡಿತ್ತು.

ವಿಶ್ವದಾದ್ಯಂತ ಲಸಿಕೆಯ ಕುರಿತು ಹಿಂಜರಿಕೆ ಹಾಗೂ ತಪ್ಪು ಮಾಹಿತಿ ಹರಡು ತ್ತಿರುವ ಹಿನ್ನೆಲೆಯಲ್ಲಿ, ಸಮುದಾಯದ ವಿಶ್ವಾಸ ಗಳಿಸುವುದು ಅತಿ ಮುಖ್ಯವಾಗಿದೆ ಎಂದು ರಶೀದ್ ಹೇಳಿದ್ದಾರೆ.

ಕೊರೊನಾ ಲಸಿಕೆಯನ್ನು ಪಡೆಯುವ ಹಾಗೂ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಯಲ್ಲಿ ಮುಸ್ಲಿಮ್ ಸಂಸ್ಥೆಯನ್ನು ಜೊತೆ ಮಾಡಿಕೊಳ್ಳುವುದಾಗಿ ಇಂಡೋನೇಷಿಯಾ ಸರ್ಕಾರ ಈಗಾಗಲೇ ತಿಳಿಸಿದೆ. ಈ ವಿಷಯ ಕ್ಕಾಗಿಯೇ ಇಂಡೋನೇಷಿಯಾದ ವಿದ್ವಾಂ ಸರು ಇತ್ತೀಚೆಗೆ ಚೀನಾದ ಲಸಿಕೆ ಉತ್ಪಾ ದನಾ ಘಟಕಗಳಿಗೂ ಭೇಟಿ ನೀಡಿದ್ದರು.

error: Content is protected !!