ಹರಿಹರ, ಡಿ.20- ಹರ ವಿವಿಧೋದ್ದೇಶ ಸಹಕಾರ ಸಂಘವು ಸರ್ವ ಸದಸ್ಯರ ಉತ್ತಮ ಸಹಕಾರ ಮತ್ತು ಆಡಳಿತ ಮಂಡಳಿಯ ಪ್ರೋತ್ಸಾ ಹದಿಂದಾಗಿ ಸುಮಾರು 12 ಲಕ್ಷದ 46 ಸಾವಿರ ರೂ. ನಿವ್ವಳ ಲಾಭವನ್ನು ಗಳಿಸುವ ಮೂಲಕ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ಹೇಳಿದರು.
ನಗರದ ಹರ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ನಡೆದ ಹರ ವಿವಿಧೋ ದ್ದೇಶ ಸಹಕಾರ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 2355 ಷೇ ರುದಾರರು ಮತ್ತು 509 ಸಹ ಷೇರುದಾರರನ್ನು ಹೊಂದಿ 3,21, 28,944 ರೂ. ಠೇವಣಿಯನ್ನು ಹೊಂದಿದೆ. ಈ ಆರ್ಥಿಕ ವರ್ಷದಲ್ಲಿ 21,93, 319 ರೂ. ವಹಿವಾಟು ಮಾಡುವುದರೊಂದಿಗೆ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ.
ಸಂಘದ ಉಪಾಧ್ಯಕ್ಷ ಅಂಗಡಿ ಬಸಟ್ಟೆಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮತ್ತು ರೈತರಿಗೆ ಸುಗ್ಗಿಯ ಸಮಯ ಮತ್ತು ಕೊರೊನಾ ಹಿನ್ನೆಲೆ ಯಲ್ಲಿ ಈ ಬಾರಿಯ ವಾರ್ಷಿಕ ಮಹಾಸಭೆಯನ್ನು ಸರಳವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ವಾರ್ಷಿಕ ವರದಿಯನ್ನು ಜಿ.ವಿ. ಲೋಕೇಶ್, ಜಿ.ಹೆಚ್. ಹರೀಶ್ ಅವರು ಓದಿದರು. ಶಿವಶಂಕರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೀಟೂರು ಚಂದ್ರಶೇಖರಪ್ಪ, ಗುತ್ತೂರು ಶಂಕ್ರಪ್ಪ ಗೌಡ್ರು, ಶಿಕ್ಷಕ ಕೊಟ್ರೇಶ್, ಚಿದಾನಂದ ಕಂಚಿಕೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಂಗಡಿ ಬಸೆ ಟ್ಟೆಪ್ಪ, ನಿರ್ದೇಶಕರಾದ ಎಂ. ಗುರುನಾಥ, ಟಿ.ಎನ್. ನಾಗರಾಜ್, ಎಸ್.ಎಂ. ರವಿ, ಬಿ. ಬಸವಲಿಂಗಪ್ಪ ಗೌಡ್ರು, ಬಿ.ಬಿ. ಕುಮಾರ್, ಲತಾ ಕೊಟ್ರೇಶ್, ರೂಪ ನಾಗರಾಜ್, ಎನ್.ಆರ್. ಶಂಕ್ರಪ್ಪ, ಪಿ.ಎನ್. ಗೋಪಿ, ಎಂ. ನಾಗರಾಜ್, ಮುಖ್ಯ ಕಾರ್ಯದರ್ಶಿ ಜಿ.ವಿ. ಲೋಕೇಶ್, ಸಿಬ್ಬಂದಿ ಹರೀಶ್ ಜಿ.ಹೆಚ್, ಬಿ.ಓ. ಗೋವಿಂದ ರಾಜ್, ಪಿಗ್ಮಿ ಸಂಗ್ರಹಕರಾದ ಕೆ.ಆರ್. ಶಾಂತಪ್ಪ, ಎ.ಎಸ್. ಮಲ್ಲಿನಾಥ್, ಪ್ರದೀಪ್ ಕುಮಾರ್, ಶಿವಶಂಕರ್ ಎರೆಸೀಮಿ, ಬಸವಕುಮಾರ್, ಜಿ.ಎನ್. ಉಮೇಶ್, ಐ.ಎಸ್. ಮಹೇಶ್ವರಪ್ಪ, ಜಿ. ಸಿದ್ದೇಶ್ವರ್, ಪಿ.ಹೆಚ್. ವಾಮದೇವ, ಎಂ. ಅರುಣ್ ಕುಮಾರ್, ವಿ.ಎಸ್. ಮಲ್ಲಿಕಾರ್ಜುನ ಇತರರು ಹಾಜರಿದ್ದರು.