ಕಾಯಿರ್ ಉದ್ಯಮದಲ್ಲಿನ ಅವಕಾಶ ಸದ್ಬಳಕೆ ಮಾಡಿಕೊಳ್ಳಿ : ಸಂಸದ ಸಿದ್ದೇಶ್ವರ

ಕಾಯಿರ್ ಉದ್ಯಮದಲ್ಲಿನ ಅವಕಾಶ ಸದ್ಬಳಕೆ ಮಾಡಿಕೊಳ್ಳಿ : ಸಂಸದ ಸಿದ್ದೇಶ್ವರ - Janathavaniದಾವಣಗೆರೆ, ಡಿ.18- ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಏಕೈಕ ಉದ್ಯಮ ನಾರು ಉದ್ಯಮ, ಇಂತಹ ಉದ್ಯಮದಲ್ಲಿ ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು,  ಸದ್ಭಳಕೆ ಮಾಡಿಕೊಳ್ಳಿ ಎಂದು ನಾರು ಅಭಿವೃಧ್ದಿ ಮಂಡಳಿ ಸದಸ್ಯರೂ ಆದ ಸಂಸದ ಜಿ.ಎಂ.ಸಿದ್ದೇಶ್ವರ  ಕರೆ ನೀಡಿದರು.

ನಾರು ಅಭಿವೃದ್ದಿ ಮಂಡಳಿ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ವೆಬಿನಾರ್‍ನಲ್ಲಿ ವಲಯ ಮಟ್ಟದ ಕಾಯಿರ್ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರನ್ನು ಸಬಲೀಕರಗೊಳಿಸುವಲ್ಲಿ ನಾರು ಉದ್ಯಮ ಸಾಕಷ್ಟು ಕೊಡುಗೆಯನ್ನು ನೀಡಿದೆ. ಕಡಿಮೆ ಬಂಡವಾಳದಲ್ಲಿ ಅತಿ ಹೆಚ್ಚು ಉದ್ಯೋಗ ದೊರಕಿಸಿಕೊಡುವ ಉದ್ಯಮ ಇದಾಗಿದೆ ಎಂದರು.

ನಾರು ಮಂಡಳಿ ಪ್ರಸ್ತುತ ಇರುವ ಗುರಿಯನ್ನು ಮುಂದಿನ 5 ವರ್ಷಗಳಲ್ಲಿ 10 ಸಾವಿರ ಕೋಟಿಯಿಂದ 35 ಸಾವಿರ ಕೋಟಿಗೆ ನಿಗದಿಪಡಿಸಿಕೊಂಡಿದೆ. ಎಲ್ಲ ರಿಗೂ ನಾರು ಉತ್ಪನ್ನಗಳು ಸರಳವಾಗಿ ದೊರಕುವಂ ತಾಗಲು ದೇಶಾದ್ಯಂತ 2000 ಫ್ರಾಂಚೈಸಿಗಳನ್ನು ಗುರು ತಿಸುವ ಕೆಲಸದಲ್ಲಿ  ತೊಡಗಿಕೊಂಡಿದೆ. ಸಚಿವಾಲಯ ಈಗಾಗಲೇ 41 ಕಾಯಿರ್ ಕ್ಲಸ್ಟರ್‍ಗಳಿಗೆ 118 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 75 ಕಾಯಿರ್ ಕ್ಲಸ್ಟರ್‍ಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದರು.

ವೆಬಿನಾರ್‍ನಲ್ಲಿ ಕಾಯಿರ್ ಬೋರ್ಡ್ ಕಾರ್ಯ ದರ್ಶಿ ಕುಮಾರ ರಾಜ, ಮತ್ತೋರ್ವ ನಾರು ಮಂಡಳಿ ಸದಸ್ಯರಾದ ಎಸ್.ಪ್ರಭು ಭಾಗವಹಿಸಿದ್ದರು. ಕಾಯಿರ್ ಉದ್ಯಮದ ಸಾಧಕ-ಬಾಧಕಗಳ ಕುರಿತು ಕರ್ಲಾನ್ ಸಿ.ಇ.ಓ. ಜ್ಯೋತಿ ಪ್ರಧಾನ್. ಎಂ.ಕುಮಾರಸ್ವಾಮಿ ಪಿಳ್ಳೈ, ಪೀಟರ್ ಬರ್ನಾಡ್, ಕೃಷ್ಣ ಮೋಹನ್ ಸೇರಿದಂತೆ ವೆಬಿನಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!