ಚುನಾವಣೆ ಕರ್ತವ್ಯ ನಿಷ್ಪಕ್ಷಪಾತವಾಗಿರಲಿ

ಜಗಳೂರಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಜಗಳೂರು, ಡಿ.17 – ಚುನಾವಣೆಯಲ್ಲಿ ಸಿಬ್ಬಂದಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು. 

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ವೀಕ್ಷಿಸಿ ನಂತರ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತೀವ್ರ ಪೈಪೋಟಿ ನಡೆಯಲಿದ್ದು ಮತದಾನ ಜಿದ್ದಾಜಿದ್ದಿ ಯಾಗಿ ನಡೆಯುತ್ತದೆ. ಕೇವಲ ಒಂದು ಮತ ಅಂತ ರದ ಗೆಲುವಿನ ಸಾಧ್ಯತೆಗಳಿರುತ್ತದೆ. ಈ ದೆಸೆಯಿಂದ ತಾವುಗಳು ನಿರ್ಭಯದಿಂದ  ಯಾರ ಪರ ವಿರೋಧ ವಾಗಿರ ಬಾರದು, ನಡಾವಳಿಕೆ ಹಾಗೂ ನೋಡುವ ದೃಷ್ಟಿಕೋನವು ಕೂಡ ಸಹಜವಾಗಿರಬೇಕು.

ಮತಗಟ್ಟೆಯಲ್ಲಿ ಮತದಾನದ ವೇಳೆ ವ್ಯಕ್ತಿಗಳ ಅನಗತ್ಯ ಪ್ರವೇಶಕ್ಕೆ ಕಡಿವಾಣ ಹಾಕಿರಿ. ಅಗತ್ಯವಿದ್ದಲ್ಲಿ ನಿಮ್ಮ ಆದೇಶದ ಮೇರೆಗೆ ಮಾತ್ರ ಒಳಗಡೆ ಬರಬೇಕು ನೀವು ಖಡಕ್ ಆಗಿದ್ದರೆ ನಿಮ್ಮ ಬಗ್ಗೆ ಭಯವಿರುತ್ತದೆ ಎಂದು ಸಿಬ್ಬಂದಿಗೆ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ ಇಒ ಮಲ್ಲಾನಾಯ್ಕ ಸೇರಿದಂತೆ ಮತ್ತಿತರರು ಇದ್ದರು.

error: Content is protected !!