ಮಲೇಬೆ ನ್ನೂರು, ಡಿ.17- ಇಲ್ಲಿನ ಪೊಲೀಸ್ ಠಾಣೆ ಆವರ ಣದಲ್ಲಿ ನಿರ್ಮಿಸಿರುವ ಪೊಲೀಸ್ ಉದ್ಯಾನವ ನವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರುಗಳು ವಿಶಾಲ ಆವರಣದಲ್ಲಿ ಆಸಕ್ತಿ ವಹಿಸಿ ನಿರ್ಮಿಸಿರುವ ಔಷಧೀಯ ಗುಣಗಳನ್ನು ಹೊಂದಿರುವ ಇಲ್ಲಿನ ಉದ್ಯಾನವನ ಜಿಲ್ಲೆಗೇ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮನೆ ಗೆ ಬೀಗ ಹಾಕಿ ಪರ ಊರಿಗೆ ಹೊರಟಾಗ ಆ ಮನೆಯನ್ನು ಪೊಲೀಸರು ಕಾಯುವ ಹೊಸ ಸೇವೆಯಾದ ಲಾಕ್ಡೇಸ್ ಮಾನಿಟರಿಂಗ್ ಸಿಸ್ಟಮ್ಗೆ ಚಾಲನೆ ನೀಡಲಾಯಿತು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಶಿವಪ್ರಸಾದ್, ಪಿಎಸ್ಐ ವೀರಬಸಪ್ಪ, ಹರಿಹರ ಗ್ರಾಮಾಂತರ ಪಿಎಸ್ಐ ರವಿಕುಮಾರ್, ಉಪತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಧರಣೀಂದ್ರ ಕುಮಾರ್, ಎಎಸ್ಐ ಬಸವರಾಜ್, ಮಲ್ಲಿಕಾರ್ಜುನ್, ಪಟ್ಟಣದ ಸೈಯದ್ ಜಾಕೀರ್, ಎಳೆಹೊಳೆ ಕುಮಾರ್, ಶಿಕ್ಷಕ ಕುಮಾರ್, ಹೊಳೆಸಿರಿಗೆರೆ ಪಾಲಾಕ್ಷಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೋಗುಳಿ ಮಂಜುನಾಥ್ ಹಾಗು ಇನ್ನಿತರರು ಹಾಜರಿದ್ದರು.