ಶಿಕ್ಷಕರ ಸಂಘದ ಚುನಾವಣೆ: ಮತ್ತೆ ಅಧಿಕಾರಕ್ಕೆ ಹೋರಾಟ ಸಮಿತಿ

ಶಿಕ್ಷಕರ ಸಂಘದ ಚುನಾವಣೆ: ಮತ್ತೆ ಅಧಿಕಾರಕ್ಕೆ ಹೋರಾಟ ಸಮಿತಿ - Janathavaniರಾಣೇಬೆನ್ನೂರು, ಡಿ.16- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಣೇಬೆನ್ನೂರು ತಾಲ್ಲೂಕು ಘಟಕದ ಚುನಾ ವಣೆಯಲ್ಲಿ ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿರುವ ಹೋರಾಟ ಸಮಿತಿ ಭರ್ಜರಿ ಜಯ ಗಳಿಸಿದ್ದು ಮತ್ತೆ ಅಧಿಕಾರ ಹಿಡಿದಿದೆ. ಒಟ್ಟು19 ರಲ್ಲಿ ಹಾಲಿ ಅಧ್ಯಕ್ಷ ಬಿ.ಪಿ. ಶಿಡೇನೂರ ನೇತೃ ತ್ವದ ಹೋರಾಟ ಸಮಿತಿಯ 17 ಹಾಗೂ ಎದುರಾಳಿ ಕ್ರಿಯಾ ಸಮಿತಿಯ ಈರ್ವರೂ ಆಯ್ಕೆಯಾಗಿ ದ್ದಾರೆ. ಶಿವಾನಂದ ಬಾಗಾದಿ ಅವರು  ಚುನಾವಣಾಧಿಕಾರಿಯಾಗಿದ್ದರು.

ಹೋರಾಟ ಸಮಿತಿಯಿಂದ ಕೆ. ವಿ. ಕಾಟಣ್ಣನವರ, ರವಿ ಗೋಣೆ ಪ್ಪನವರ, ಬಿ.ಪಿ. ಶಿಡೇನೂರ, ಸುರೇಶ ಕೋಟಿಹಾಳ, ಎಸ್.ಹೆಚ್. ಮೇಟಿ, ಎಸ್.ಕೆ. ಹೇಮಂತ್, ಅಶೋಕ ಲಕ್ಕಪ್ಪಳವರ, ಎಚ್.ಎಂ. ಸುತಾರಾ, ಫಕ್ಕೀರಪ್ಪ ಬೀರಜ್ಜನವರ, ಎನ್.ಎಂ.  ಚವಡಣ್ಣನವರ, ಜಗದೀಶ್ ಕೃಷ್ಣಪ್ಪನವರ, ಗೀತಾ ಅಜ್ಜಿವಡಿಮಠ, ಸಾವಕ್ಕ ಮಲ್ಲನ ಗೌಡ್ರ, ಎ.ಎಸ್. ಕಟಗಿ, ಲಲಿತಾ ಶಾಮನೂರ, ಸರೋಜಿನಿ ಭರಮ ಗೌಡ್ರ, ವಿಮಲಾ ಶಿಡಗನಾಳ ಹಾಗೂ ಕ್ರಿಯಾ ಸಮಿತಿಯಿಂದ  ಎನ್.ಎಚ್. ದೇವಾಂಗದ ಮತ್ತು  ಜಿ.ಎಲ್. ಪದಕಿ ಆಯ್ಕೆಯಾಗಿದ್ದಾರೆ.

error: Content is protected !!