ಹಕ್ಕುಪತ್ರ ನೀಡಿಕೆ ಬಿಜೆಪಿ ಸರ್ಕಾರದ ಮಹತ್ಸಾಧನೆ

ರಾಣೇಬೆನ್ನೂರು ಶಾಸಕ ಅರುಣಕುಮಾರ ಪೂಜಾರ

ರಾಣೇಬೆನ್ನೂರು, ಡಿ.15-  ನಗರದ ಪೂರ್ವ ಹಾಗೂ ಪಶ್ಚಿಮ ಬಡಾವಣೆಯ ನಾಗರಿಕರಿಗೆ ಹಕ್ಕು ಪತ್ರ ನೀಡಲು ಬಿಜೆಪಿ ಸರ್ಕಾರದ ಸಂಪುಟ ಸಭೆ ನಿರ್ಣಯ ಕೈಗೊಂ ಡಿರುವುದು  ಇತಿಹಾಸದಲ್ಲಿ ಬರೆದಿಡುವ ಸಾಧನೆ ಎಂದು ಶಾಸಕ ಅರುಣಕುಮಾರ ಪೂಜಾರ ಇಂದು ತಮ್ಮ ನಿವಾಸದಲ್ಲಿ ನಡೆ ಸಿದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 23, 2018 ರಲ್ಲಿ ಸಿದ್ದರಾಮಯ್ಯ ಅವರ ಸಂಪುಟ ಸಭೆಯಲ್ಲಿನ ಪ್ರಸ್ತಾವನೆಯಲ್ಲಿ ಈ ಹಕ್ಕು, ಸ್ವಾತಂತ್ರ್ಯ ಪೂರ್ವದ ಅಲ್ಲಿನ ನಿವಾಸಿಗಳಿಗೆ ಸೀಮಿತವಾ ಗಿತ್ತು. ಹಾಗಾಗಿ ನಗರದ ಯಾರೊಬ್ಬರಿಗೂ  ಇದು ಅನ್ವಯವಾಗುವು ದಿಲ್ಲ ಎನ್ನುವುದನ್ನು ಮುಖ್ಯಮಂತ್ರಿ, ನಗರಾಡಳಿತ ಹಾಗೂ ಜಿಲ್ಲಾ ಮಂತ್ರಿಗಳ ಗಮನಕ್ಕೆ ತರಲಾಗಿ ಸಂಪುಟ ಸಭೆಯಲ್ಲಿ ಅಲ್ಲಿನ ಎಲ್ಲ ನಿವಾಸಿಗಳಿಗೂ ಅನ್ವಯವಾ ಗುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.

ಹಿಂದಿನ ಯಾರೊಬ್ಬರೂ  ಈ ಬಗ್ಗೆ ಕ್ರಮಕೈಗೊಳ್ಳಲಿಲ್ಲ. ವಿಧಾನಸಭೆ ಅಧ್ಯಕ್ಷರಾ ಗಿದ್ದ ಕೆ.ಬಿ. ಕೋಳಿವಾಡ ಅವರು ಸಹ ಇಲ್ಲಿನ ಎಲ್ಲ ಜನರ ಬಗ್ಗೆ ಆಲೋಚಿಸಲಿಲ್ಲ. ನಾನು ಇದಕ್ಕಾಗಿ 8-10 ತಿಂಗಳಿಂದ ಸರ್ಕಾರ ಹಾಗೂ ಅಧಿಕಾರಿಗಳ ಬಳಿ ಅಲೆದಾಡಿದೆ. ಇದಕ್ಕಾಗಿ ನಾನು ಹಾಕಿದ ಶ್ರಮ ಅಪಾರ ವಾಗಿದೆ ಎಂದು  ಶಾಸಕರು ವಿವರಿಸಿದರು.

ಪೂರ್ವ ಬಡಾವಣೆಯ 623, ಪಶ್ಚಿಮ ಬಡಾವಣೆಯ 652 ನಿವೇಶನದಾರರಿಗೆ ಅವರ ಹಕ್ಕು ಪತ್ರ ಕೊಡಿಸುವ ನಮ್ಮ ಸರ್ಕಾ ರದ ಜನೋಪ ಯೋಗಿ ಕಾರ್ಯದಿಂದ ನಗರದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಂ ಡಿತು ಎಂದು ಪೂಜಾರ ಹರ್ಷ ವ್ಯಕ್ತಪಡಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ರಾಜು ಅಡ್ಮನಿ, ಪ್ರಕಾಶ ಬುರಡಿಕಟ್ಟಿ, ಮಲ್ಲಣ್ಣ ಅಂಗಡಿ, ಪ್ರಭಾವತಿ ತಿಳವಳ್ಳಿ, ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಚೋಳಪ್ಪ ಕಸವಾಳ, ಸಂತೋಷ ಪಾಟೀಲ, ಮಂಜುನಾಥ ಓಲೇಕಾರ ಇನ್ನಿತರರಿದ್ದರು.

error: Content is protected !!