ಗ್ರಾ.ಪಂ ಎರಡನೇ ಹಂತದ ಚುನಾವಣಾ ಅಧಿಸೂಚನೆ
ದಾವಣಗೆರೆ, ಡಿ.12- ನ್ಯಾಮತಿ, ಚನ್ನಗಿರಿ ಮತ್ತು ಹರಿಹರ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಅವಧಿ ಪೂರ್ಣಗೊಳ್ಳದಿರುವ ಗ್ರಾಮ ಪಂಚಾಯ್ತಿಗಳನ್ನು ಹೊರತುಪಡಿಸಿ ಅವಧಿ ಪೂರ್ಣಗೊಂಡಿರುವ ಎಲ್ಲಾ ಗ್ರಾ.ಪಂ ಗಳ ಎಲ್ಲಾ ಚುನಾವಣಾ ಕ್ಷೇತ್ರಗಳಿಂದ ಗ್ರಾ.ಪಂ ಗಳಿಗೆ ಸದಸ್ಯರ ಸ್ಥಾನ ತುಂಬಲು ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು.
ಇದೇ ದಿನಾಂಕ 16 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನವಾಗಿದೆ. ದಿನಾಂಕ 17 ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದೆ. ದಿನಾಂಕ 19 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ದಿನಾಂಕ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಸಬೇಕಾದ ದಿನಾಂಕ ಮತ್ತು ದಿನವಾಗಿರುತ್ತದೆ. ದಿನಾಂಕ 31 ಚುನಾವಣೆ ಮುಕ್ತಾಯಗೊಳ್ಳಲಿದೆ.
ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮ ಪಂಚಾಯ್ತಿಯ ಅವಧಿ ಪೂರ್ಣಗೊಳ್ಳದ ಕಾರಣ ಚುನಾವಣಾ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.