ಶಿವ ಸಹಕಾರಿ ಬ್ಯಾಂಕ್‌ಗೆ 3 ಕೋಟಿ ಲಾಭ

ಬ್ಯಾಂಕಿನ 46ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಂಗಮೇಶ್ವರ ಗೌಡ್ರು ಸಂತಸ

ದಾವಣಗೆರೆ, ಡಿ.13- ಸದಸ್ಯರ ಸಹಕಾರದಿಂದ ಸದಾ ಅಭಿವೃದ್ಧಿ ಪಥದಲ್ಲಿರುವ ನಗರದ ಶಿವ ಸಹಕಾರಿ ಬ್ಯಾಂಕ್ 2019-20ರ ಆರ್ಥಿಕ ವರ್ಷದಲ್ಲಿ 3.03 ಕೋಟಿ ರೂ. ಲಾಭ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡ್ರು ತಿಳಿಸಿದರು.

ನಗರದ ಚಾಮರಾಜಪೇಟೆಯಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಆವರಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಇಂದು ನಡೆದ ಶಿವ ಸಹಕಾರಿ ಬ್ಯಾಂಕಿನ 46ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

22 ಕೋಟಿ 76 ಲಕ್ಷದ 65 ಸಾವಿರದ 599 ರೂ.ಗಳ ಆದಾಯ ಹೊಂದಿದ್ದು, ಇದರಲ್ಲಿ 3.03 ಕೋಟಿ ರೂ. ಲಾಭ ಗಳಿಸಿದ್ದು, ಇದರಲ್ಲಿ 1.01 ಲಕ್ಷ ಆದಾಯ ತೆರಿಗೆ ವಜಾ ಜಾತ 2.02 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

2019-20ನೇ ಸಾಲಿನಲ್ಲಿ 5,54,40,600 ರೂ. ಷೇರು ಬಂಡವಾಳ ಹೊಂದಿದೆ. ಬ್ಯಾಂಕಿನ ಆರ್ಥಿಕ ಸ್ಥಿರತೆಗೆ ಕಾರಣವಾಗುವ ಆಪದ್ಧನ ಮತ್ತಿತರೆ ನಿಧಿಗಳ ಮೊತ್ತವೂ ಕಳೆದ ಸಾಲಿಗಿಂತ 2,55,91,638 ರೂ.ಗೆ ಅಧಿಕಗೊಂಡು ಪ್ರಸ್ತುತ 21 ಕೋಟಿ 72 ಲಕ್ಷದ 52 ಸಾವಿರದ 582 ರೂ. ಆಗಿದೆ ಎಂದು ಸಂಗಮೇಶ್ವರ ಗೌಡ್ರು ವಿವರಿಸಿದರು.

ಈ ಸಾಲಿನಲ್ಲಿಯೂ `ಎ¬ ಶ್ರೇಣಿಯಲ್ಲಿರುವ ಬ್ಯಾಂಕ್, ಮುಂದಿನ ಆರ್ಥಿಕ ವರ್ಷಕ್ಕೂ ನಿರ್ದಿಷ್ಟ ಗುರಿಗಳನ್ನು ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಣೆ, ಸಾಲ ಮುಂಗಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದು. ಹಾಗೆಯೇ ಸುಸ್ತಿ ಸಾಲ ವಸೂಲಾತಿ ಹೆಚ್ಚಳ, ಅನುತ್ಪಾದಕ ಆಸ್ತಿ ಪ್ರಮಾಣದ ಇಳಿಕೆ, ಅಗತ್ಯವಿದ್ದಲ್ಲಿ ಬ್ಯಾಂಕಿನ ಶಾಖೆಗಳ ಆರಂಭ, ಇವು ಮುಂದಿನ ವರ್ಷದ ಗುರಿಗಳಾಗಿವೆ. ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುವ ವ್ಯವಸ್ಥೆ ಪೂರ್ಣಗೊಂಡಿದ್ದು, ಬ್ಯಾಂಕಿನ ಗ್ರಾಹಕರು ಎಟಿಎಂ ಕಾರ್ಡ್ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಆರ್. ಸಿದ್ದರಾಮಪ್ಪ ಅವರು, ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿ ವಾಚನ ಮಾಡಿದರು. ನಂತರ ಅನುಮೋದನೆಯನ್ನು ಪಡೆಯಲಾಯಿತು. ಮರಣ ಹೊಂದಿದ ಬ್ಯಾಂಕಿನ ಸದಸ್ಯರುಗಳ ಆತ್ಮಕ್ಕೆ ಇದೇ ವೇಳೆ ಚಿರಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.  ಈ ವಿಷಯವನ್ನು ನಿರ್ದೇಶಕ ಡಿ.ಹೆಚ್. ಪ್ರಭು ನೆರವೇರಿಸಿದರು.

ಸಭೆಯ ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್, ನಿರ್ದೇಶಕರುಗಳಾದ ಕೆ.ಪಿ. ಪ್ರದೀಪ್, ಜಿ. ಸಿದ್ದಪ್ಪ, ಜಿ.ಪಿ. ವಾಗೀಶ್ ಬಾಬು, ಜೆ.ಎಸ್. ಸಿದ್ದಪ್ಪ, ಎನ್. ವಸಂತ, ಡಿ. ನಿರ್ಮಲ, ವೃತ್ತಿಪರ ನಿರ್ದೇಶಕರುಗಳಾದ ಈ. ಚಂದ್ರಣ್ಣ, ಎಸ್. ರಾಜಶೇಖರ್ ಸೇರಿದಂತೆ ಇತರರು ಇದ್ದರು. 

ಸುಮಾರು 2 ಸಾವಿರ ಜನ ಬ್ಯಾಂಕಿನ ಸದಸ್ಯರುಗಳು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸಭೆಯಲ್ಲಿ ಭಾಗವಹಿಸಿದ್ದರು.

ಶಾಖಾ ವ್ಯವಸ್ಥಾಪಕ ಬಿ.ಆರ್. ವೀಣಾ ಪ್ರಾರ್ಥಿಸಿದರು. ನಿರ್ದೇಶಕ ಬಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಜಿ.ಎಂ. ನಾಗಪ್ಪ ನಿರೂಪಿಸಿದರು. ನಿರ್ದೇಶಕ ದೊಗ್ಗಳ್ಳಿ ಎಂ. ಬಸವರಾಜ್ ವಂದಿಸಿದರು.

error: Content is protected !!