ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಎಂ.ಗುರುಮೂರ್ತಿ
ಹರಿಹರ, ಡಿ.10- ಬದುಕಲು ಸಂಘಟನೆಗೆ ಬರಬೇಡಿ, ಜನರ ಬದುಕನ್ನು ಬದಲಾಯಿಸಲು ಸಂಘಟನೆಗೆ ಬನ್ನಿ ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.
ನಗರದ ಅಕ್ಷಯ ಆಸ್ಪತ್ರೆ ಆವರಣದಲ್ಲಿ ಡಾ.ಅಂಬೇಡ್ಕರ್ 64ನೇ ಪರಿನಿರ್ವಾಣ ದಿನದ ಅಂಗವಾಗಿ ದಸಂಸ ತಾಲ್ಲೂಕು ಸಮಿತಿ, ಅಕ್ಷಯ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ, ನಾಯಕತ್ವ ಎನ್ನುವುದು ಉದ್ಯೋಗವಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಕೆಲವರು ಸಂಘಟನೆ ಯನ್ನು ತಮ್ಮ ಸ್ವಂತ ಉದ್ಧಾರಕ್ಕೆ ಎಂಬಂತೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಇದು ನಮ್ಮ ತತ್ವ, ಸಿದ್ಧಾಂತ, ವಿಚಾರಧಾರೆಗೆ ಧಕ್ಕೆ ತರುತ್ತದೆ ಎಂದು ವಿಷಾದಿಸಿದರು.
ಡಾ. ಅಂಬೇಡ್ಕರ್ರವರಿಗೆ ಅಪಮಾನ ಮಾಡಿದ್ದು ದೇಶವಲ್ಲ ಬದಲಿಗೆ ಮನುವಾ ದಿಗಳೆಂದ ಅವರು, ಅಪಮಾನಕ್ಕಿಂತ ಆಳ ವಾದ ಗಾಯ ಮತ್ತೊಂದಿಲ್ಲ. ದೇವಸ್ಥಾನ ದೊಳಗೆ ಪ್ರವೇಶ ನಿಷೇಧ, ಸಾರ್ವಜನಿಕ ವಾಗಿರುವ ಕೆರೆ, ಕಟ್ಟೆ, ಬಾವಿಗಳಿಂದ ನೀರು ಮುಟ್ಟಲು ಬಿಡದಿರುವುದು. ಭೀಕರ ಜಾತೀಯತೆಯ ಅಪಮಾನವನ್ನು ಅನುಭವಿಸಿದ ಅಂಬೇಡ್ಕರ್ ಅದನ್ನು ಕಿತ್ತೊಗೆಯಲು ಪಣ ತೊಟ್ಟರು ಎಂದರು.
ಸಾಮ್ರಾಜ್ಯಶಾಹಿವಾದ, ಬಂಡವಾಳ ಶಾಹಿಗಳ ವಿರುದ್ಧ ದಸಂಸ ನಿರಂತರ ಸಂಘ ಟಿತ ಹೋರಾಟ ಮಾಡಬೇಕಿದೆ. ದಾರಿ ತಪ್ಪಿ ಸುವ ತಾತ್ಕಾಲಿಕ ಆಕರ್ಷಣೆಗಳಿಂದ ದೂರ ವಿದ್ದು ಸಂಘಟನೆ, ಏಕತೆಗೆ ಒತ್ತು ನೀಡಬೇಕು, ಶೋಷಿತರೆಲ್ಲ ಒಂದಾಗಬೇಕಿದೆ ಎಂದರು.
ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ.ನಾಗರಾಜ್ ವಿ.ಟಿ. ಮಾತನಾಡಿ, ದೇಶದ ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಅಂಬೇಡ್ಕರ್ ಬಹುವಾಗಿ ಶ್ರಮಿಸಿದ್ದರು ಎಂದರು.
ಶಾಸಕ ಎಸ್.ರಾಮಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಡಾ. ಎನ್. ಸೀಮಾ, ಡಾ. ನಜೀಬ್ಉಲ್ಲಾ ಖಾನ್, ಡಾ.ಅನಂತರಾಜ್ ಜಿ.ಎಸ್. ಶಿಬಿರ ನಡೆಸಿಕೊಟ್ಟರು. ದಸಂಸ ಮುಖಂಡರಾದ ಹೊನ್ನಾಳಿ ಅಶೋಕ್, ಹನುಮಂತಪ್ಪ ಎಡಾಳ್, ರಾಜು, ಸಂದೀಪ್ ಶಿವಮೊಗ್ಗ, ಡಿ.ಎಂ. ಮಂಜುನಾಥ್, ಭಾನುವಳ್ಳಿ ಸಿ. ಚೌಡಪ್ಪ, ಹಳದಪ್ಪ, ಹರೀಶ್, ಯುವರಾಜ ಹೊಸಪಾಳ್ಯ, ರಾಜಪ್ಪ, ಫಾರ್ಮಾಸಿಸ್ಟ್ ಕರಿಬಸಪ್ಪ, ಅಶೋಕ್ ಉಕ್ಕಡಗಾತ್ರಿ, ಚಂದ್ರಶೇಖರ್ ಆಮ್ರದ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.