ಬ್ರಿಟನ್ : ಮೊದಲ ಕೊರೊನಾ ಲಸಿಕೆ ಪಡೆದ 90ರ ವೃದ್ಧೆ

ಬ್ರಿಟನ್ : ಮೊದಲ ಕೊರೊನಾ ಲಸಿಕೆ ಪಡೆದ 90ರ ವೃದ್ಧೆ - Janathavaniಲಂಡನ್‌, ಡಿ. 8 – ಬ್ರಿಟನ್‌ ಅತಿ ದೊಡ್ಡ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೊಟ್ಟ ಮೊದಲ ಲಸಿಕೆಯನ್ನು 90 ವರ್ಷದ ಮಾರ್ಗರೇಟ್ ಕೀನನ್ ಪಡೆದಿದ್ದಾರೆ. ಸಾರ್ವಜನಿಕ ಅಭಿಯಾನದ ಮೂಲಕ ಕೊರೊನಾ ಲಸಿಕೆ ಪಡೆದ ಮೊದಲ ಮಹಿಳೆಯೂ ಅವರಾಗಿದ್ದಾರೆ.

ಬೆಳಿಗ್ಗೆ 6.31ರ ಸಮಯದಲ್ಲಿ ಮಾರ್ಗರೇಟ್‌ ಅವರಿಗೆ ನರ್ಸ್ ಮೇ ಪ್ಯಾರ್ಸನಸ್‌ ಅವರು ಸ್ಥಳೀಯ ಕೊವೆಂಟ್ರಿ ಆಸ್ಪತ್ರೆಯಲ್ಲಿ ಲಸಿಕೆ ನೀಡಿದ್ದಾರೆ. ಇದರೊಂದಿಗೆ ಮಹತ್ವದ ಲಸಿಕಾ ಅಭಿಯಾನ ಆರಂಭವಾಗಿದೆ ಎಂದು ಬ್ರಿಟನ್ ತಿಳಿಸಿದೆ.

ಕೊರೊನಾ ಲಸಿಕೆ ಪಡೆದ ಮೊದಲ ವ್ಯಕ್ತಿ ನಾನಾಗಿರುವುದು ಸಂತೋಷ ತಂದಿದೆ. ಜನ್ಮ ದಿನದ ಕೊಡುಗೆ ಮೊದಲೇ ದೊರೆತಂತಾಗಿದೆ. ಇಡೀ ವರ್ಷ ಪ್ರತ್ಯೇಕವಾಗಿದ್ದ ನಾನು ಹೊಸ ವರ್ಷವನ್ನು ನನ್ನ ಕುಟುಂಬದವರು ಹಾಗೂ ಗೆಳೆಯರ ಜೊತೆ ಕಳೆಯುವ ನಿರೀಕ್ಷೆಯಲ್ಲಿದ್ದೇನೆ ಎಂದು ಮಾರ್ಗರೇಟ್‌ ಹೇಳಿದ್ದಾರೆ. ಮುಂದಿನ ವಾರ ಅವರು 91ನೇ ಹರೆಯಕ್ಕೆ ಕಾಲಿಡಲಿದ್ದಾರೆ.

ಆಭರಣ ಅಂಗಡಿಯ ಮಾಜಿ ಸಹಾಯಕಿ ಯಾಗಿದ್ದ ಅವರು, ಒಂಭತ್ತು ವರ್ಷಗಳ ಹಿಂದೆ ನಿವೃತ್ತರಾಗಿ ದ್ದಾರೆ. ಓರ್ವ ಪುತ್ರ ಓರ್ವ ಪುತ್ರಿ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಹೊಂದಿರುವ ಅವರು, 21 ದಿನಗಳ ನಂತರ ನೀಡಲಾಗುವ ಬೂಸ್ಟರ್ ಡೋಸ್ ಪಡೆದ ನಂತರ ಮನೆಯಿಂದ ಹೊರಗೆ ಹೊರಡಲು ನಿರ್ಧರಿಸಿದ್ದಾರೆ.

ಕೊರೊನಾ ಅತಿ ಹೆಚ್ಚು ಅಪಾಯ ಇರುವವರಿಗೆ ಮೊದಲ ಕಂತಿನಲ್ಲಿ ಲಸಿಕೆ ನೀಡಲಾಗುತ್ತಿದೆ. 87 ವರ್ಷದ ಭಾರತೀಯ ಮೂಲದ ಬ್ರಿಟನ್ ನಾಗರಿಕರಾಗಿರುವ ಹರಿ ಶುಕ್ಲ ಅವರು ಮೊದಲ ಸುತ್ತಿನಲ್ಲಿ ಲಸಿಕೆ ಪಡೆದವರಲ್ಲಿ ಸೇರಿದ್ದಾರೆ.

ನಾವು ಕೊರೊನಾ ಮಹಾಮಾರಿಯ ಅಂತ್ಯದ ಹತ್ತಿರಕ್ಕೆ ಬರುತ್ತಿದ್ದೇವೆ ಎಂಬ ಆಶಾಭಾವನೆ ಇದೆ. ಲಸಿಕೆಯ ದಿಸೆಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ಲಸಿಕಾ ಅಭಿಯಾನದ ಭಾಗವಾಗಿರುವ ಡಾ. ಶುಕ್ಲ ತಿಳಿಸಿದ್ದಾರೆ.

80 ವರ್ಷಕ್ಕಿಂತ ಹೆಚ್ಚಿನವರಿಗೆ ಬ್ರಿಟನ್‌ನಲ್ಲಿ ಲಸಿಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರೂ ಸಹ ಮೊದಲ ಸುತ್ತಿನಲ್ಲಿ ಲಸಿಕೆ ಪಡೆಯಲಿದ್ದಾರೆ.

error: Content is protected !!