ಹರಿಹರ, ಡಿ.6- ಹರಿಹರ ಮರ್ಚೆಂಟ್ಸ್ ಸೌಹಾರ್ದ ಕೋ-ಆಪರೇಟಿವ್ ನಿಯಮಿತವು 2019-20 ನೇ ಸಾಲಿನಲ್ಲಿ 9,72,133 ರು.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ. ನಾಗರಾಜ್ ತಿಳಿಸಿದ್ದಾರೆ.
ನಗರದ ರಚನಾ ಕ್ರೀಡಾ ಟ್ರಸ್ಟ್ ಕಚೇರಿಯಲ್ಲಿ ಇಂದು ನಡೆದ ಹರಿಹರ ಮರ್ಚೆಂಟ್ಸ್ ಸೌಹಾರ್ದ ಕೋ-ಆಪ್ ನಿಯಮಿತದ ಆರನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಸ್ಥೆಯು ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸದಸ್ಯರ ಸರ್ವತೋಮುಖ ಅಭಿವೃದ್ಧಿ ಗಾಗಿ ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಲು ಹಿಂದುಳಿದ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಸಹಕಾರಿಯು 24,02,000 ರು. ಷೇರು ಬಂಡವಾಳ, 1,76,56,298 ವಿವಿಧ ರೀತಿಯ ಠೇವಣಿ ಹೊಂದಿದೆ. 1,86,20,467 ರು.ಗಳ ಸಾಲ ಸೌಲಭ್ಯ ನೀಡಲಾಗಿದೆ. 43,38,640 ರು. ಠೇವಣಿ ಇಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ. ಪ್ರವೀಣ್ ಹೆಗಡೆ, ನಿರ್ದೇಶಕರಾದ ಜಿ.ಕೆ. ವೀರಣ್ಣ, ಹೆಚ್.ಎಸ್. ಮಂಜುನಾಥ್, ಜಿ.ನಂಜಪ್ಪ, ಹೆಚ್.ವಿ. ಸುಜಯ್, ಮಯೂರ್ ಹೆಚ್.ಎನ್, ರಾಘವೇಂದ್ರ ಬೊಂಗಾಳೆ, ಡಾ. ಸೀಮಾ ಎನ್, ಸುನೀತಾ ಪಿ. ಬದ್ದಿ, ನಾಗರತ್ನ ಜಿ.ಕೆ, ಮಂಜುಳಾ ಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಸಿಬ್ಬಂದಿಗಳಾದ ಕಾರ್ಯದರ್ಶಿ ಶಿವನಗೌಡ್ರು, ಬೀರಪ್ಪ ಕಮತರ, ಶ್ರೀನಾಥ್ ಪಿ.ಬಿ. ಕರಿಬಸಪ್ಪ, ಪಿ.ಎಸ್., ಪಿಗ್ಮಿ ಸಂಗ್ರಹಕಾರರಾದ ವೀರೇಶ್ ನೀಲಗುಂದ, ಎಸ್.ಬಿ. ಕುಂಚೂರು, ಪರಶುರಾಮ್ ಪವಾರ್, ಜಿ.ವಿ. ಬಸವರಾಜ್, ರಾಘವೇಂದ್ರ ಮತ್ತು ಇತರರು ಹಾಜರಿದ್ದರು.