ದಾವಣಗೆರೆ, ಡಿ.3- ಮಹಾರಾಷ್ಟ್ರದ ಅಮ ರಾವತಿಯಲ್ಲಿ ನಾಳೆ ದಿನಾಂಕ 4ರಿಂದ 7ರವರೆಗೆ ಅಮೆಚೂರ್ ಪವರ್ ಲಿಫ್ಟಿಂಗ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿರುವ ಅಂತರ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ನಗರದ ಎಂಟು ಜನ ಕ್ರೀಡಾಪಟುಗಳು ಮಂಗಳವಾರ ತೆರಳಲಿದ್ದಾರೆ.
ಈ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಸಾಯಿ ಜಿಮ್‍ನ 6 ಮತ್ತು ಬೀರಲಿಂಗೇಶ್ವರ ವ್ಯಾಯಾಮ ಶಾಲೆಯ ಇಬ್ಬರು ಕ್ರೀಡಾಪಟುಗಳು ಭಾಗವಹಿ ಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಪವರ್ ಲಿಫ್ಟಿಂಗ್ ಅಸೋಸಿಯೇ ಷನ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸಾಯಿ ನಾಥ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಬ್ ಜ್ಯೂನಿಯರ್ ವಿಭಾಗದಲ್ಲಿ ಎಫ್. ಇಸ್ಮಾಯಿಲ್ ಮತ್ತು ಸಿ. ದಿವ್ಯಾ, ಜ್ಯೂನಿಯರ್ ವಿಭಾಗದಲ್ಲಿ ಗಣೇಶ್ ಹಾಗೂ ಮಂಜುನಾಥ್, ಮಾಸ್ಟರ್ಸ್ ವಿಭಾಗದಲ್ಲಿ ಎ. ಚಂದ್ರಪ್ಪ, ಸಿ. ಫಕೃದ್ದೀನ್, ಲಕ್ಷ್ಮಿಕಾಂತ್ ಮತ್ತು ರೆಫರಿಯಾಗಿ ಆಯ್ಕೆಯಾಗಿರುವ ವಿರೂಪಾಕ್ಷಪ್ಪ ಈ ಚಾಂಪಿಯನ್‍ಶಿಪ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿ ರುವ ಕ್ರೀಡಾಪಟುಗಳನ್ನು ಮಹಾರಾಷ್ಟ್ರದ ಅಮರಾವತಿಗೆ ಕಳುಹಿಸಿ ಕೊಡಲು ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್‍ನಿಂದ ಆರ್ಥಿಕ ನೆರವು ಕೊಡಿಸಿದ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ.ರಾಮಚಂದ್ರ ಹಾಗೂ ಪಾಲಿಕೆ ಮಾಜಿ ಸದಸ್ಯ ಕೃಷ್ಣಮೂರ್ತಿ ಪವಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳಾದ ಹೆಚ್.ವೈ. ಶಶಿಧರ್, ಎಸ್.ಎಚ್. ಮಂಜುನಾಥ್, ಅಂತರರಾಷ್ಟ್ರೀಯ ರೆಫರಿ ವಿರೂಪಾಕ್ಷಪ್ಪ, ಕ್ರೀಡಾಪಟುಗಳಾದ ಸಿ. ಫಕೃ ದ್ದೀನ್, ಎಫ್. ಇಸ್ಮಾಯಿಲ್, ಬಿ. ಮಂಜು ನಾಥ್, ದೇಹದಾರ್ಢ್ಯ ಪಟು ಮಹೇಶ್ ಇದ್ದರು.