ದಾವಣಗೆರೆ, ನ.29- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಸಾಪುರ ಗ್ರಾಮದ ಸ್ಮಶಾನದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸೆಸ್, ಬಹುದಿನಗಳ ಕಾಲ ಬಸಾಪುರ ಗ್ರಾಮದ ಸ್ಮಶಾನದ ಕಾಂಪೌಂಡ್ ನಿರ್ಮಿಸುವಂತೆ ಮನವಿ ಸಲ್ಲಿಸಲಾಗುತ್ತಿತ್ತು. ಕೆಲವು ತಾಂತ್ರಿಕ ತೊಂದರೆಯಿಂದ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿತ್ತು ಎಂದರು.
ಇದೀಗ ಸ್ಮಶಾನದ ಕಾಂಪೌಂಡ್ ನಿರ್ಮಾಣಕ್ಕೆ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸ್ಮಶಾನದ ಕಾಂಪೌಂಡ್ ನಿರ್ಮಾಣವಾಗಲಿದೆ ಎಂದರು.
ಇದೇ ವೇಳೆ ಗ್ರಾಮಸ್ಥರು ಹೊಲಗಳಿಗೆ ಹೋಗುವ ರಸ್ತೆ ಸೇರಿದಂತೆ ಇನ್ನು ಕೆಲವು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶೀಘ್ರ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯರೂ ಆಗಿರುವ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ, ಮುಖಂಡ ಸುರೇಂದ್ರಪ್ಪ, ಸಿ.ಮಹೇಶ್ವರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಕೊಟ್ರಯ್ಯ, ಮಾಜಿ ಉಪ ಮೇಯರ್ ಗೌಡ್ರ ರಾಜಶೇಖರ್, ದೂಡಾ ಮಾಜಿ ಸದಸ್ಯ ಎಂ.ಎಸ್. ಕೊಟ್ರಯ್ಯ, ಆರ್ಎಂಸಿ ಎಸ್ಐ ಅನ್ನಪೂರ್ಣಮ್ಮ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕೆ.ಎಲ್ ಹರೀಶ್ ಬಸಾಪುರ, ಗ್ರಾಮದ ಮುಖಂಡರುಗಳಾದ ನಾಗೇಂದ್ರಚಾರ್, ಕೆಂಪನಹಳ್ಳಿ ಲಿಂಗೇಶ್ವರಪ್ಪ, ಬಿ.ಟಿ.ಮರುಳಸಿದ್ದಪ್ಪ, ಕೆ.ಬಿ.ಪ್ರಕಾಶ್, ರೇವಣಸಿದ್ದಯ್ಯ, ಎಸ್.ಎಂ.ಗುರುಸಿದ್ದಪ್ಪ, ಎನ್.ಎಂ.ಕೊಟ್ರಯ್ಯ, ವಿಜಯ್ಕುಮಾರ್, ದೇವೇಂದ್ರಪ್ಪ, ಅಕ್ಕಿ ರಾಜು, ಗೌಡ್ರು ಕರಿಬಸಯ್ಯ, ಬಸವರಾಜಯ್ಯ, ಬೇತೂರ್ ನಾಗರಾಜ್, ವಿಜಯ್ ಕುಮಾರ್, ಚೌಡಪ್ಪ, ವೀರೇಶ್, ಹನುಮಂತಪ್ಪ, ನಾಗರಾಜ್, ತಿಪ್ಪೇಶ್, ಪಂಚಾಕ್ಷರಯ್ಯ, ಮಲ್ಲಿಕಾರ್ಜುನ್, ಗುತ್ತಿಗೆದಾರ ಕೆ.ಬಿ.ಲಿಂಗರಾಜ್, ಇಂಜಿನಿಯರ್ ಮುರುಗೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.