ಜಗಳೂರು : ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಜಿ. ತಿಮ್ಮಯ್ಯ
ಸಂವಿಧಾನಬದ್ಧ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು. – ಡಾ.ನಾಗವೇಣಿ, ತಹಶೀಲ್ದಾರ್
ಜಗಳೂರು, ನ.27- ಸಂವಿಧಾನದ ಆಶಯಗಳನ್ನು ಉಳಿಸಿ, ಗೌರವ ತರುವ ಹೊಣೆಗಾರಿಕೆ ನಮ್ಮದಾಗಬೇಕು ಎಂದು ಜೆಎಂಎಫ್ ಸಿ ಹಾಗೂ ಸಿವಿಲ್ ನ್ಯಾಯಾಧೀಶ ಜಿ. ತಿಮ್ಮಯ್ಯ ಸಲಹೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ದೇಶಗಳ ಸಂವಿಧಾನ ಅದ್ಯಯನದೊಂದಿಗೆ ಸ್ವತಃ ನೋವುಂಡು ಅಭಿಮಾನದಿಂದ ರಚಿಸಿದ ಶ್ರೇಷ್ಠ ಗ್ರಂಥ ಸಂವಿಧಾನದ ಬಗ್ಗೆ ತಾತ್ಸಾರ ಬೇಡ. ಒಂದು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿ ಬರುತ್ತವೆ. ಅಂತಹದರಲ್ಲಿ ದೇಶವೇ ಒಪ್ಪಿಕೊಂಡ ಸಂವಿಧಾನ ಗ್ರಂಥ ಎಲ್ಲರ ಒಗ್ಗಟ್ಟನ್ನು ಸಾಕ್ಷಿಕರಿಸುತ್ತದೆ ಎಂದು ತಿಳಿಸಿದರು.
ಸಂವಿಧಾನ ಅನುಷ್ಠಾನ ಮತ್ತು ಜಾರಿಗೊಳಿ ಸುವವರ ಮೇಲೆ ಅವಲಂಬಿತವಾಗಿದೆ, ರಚಿಸಿ ದವರ ಮೇಲಲ್ಲ. ಅಂದಿನ ಸಮಾಜದಲ್ಲಿ
ಅವಮಾನ ಗಳನ್ನು ಅನುಭವಿಸಿ ಛಲದಿಂದ ಸಾಧನೆಗೈದ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರು ಶ್ರೇಷ್ಠ ವ್ಯಕ್ತಿಗಳು ಎನಿಸಿಕೊಂಡಿದ್ದಾರೆ.
ಮನುಷ್ಯ ನಿಗೆ ಜ್ಞಾನದ ವಿದ್ವತ್ತುನಿಂದ ಗುರುತಿಸಿಕೊಳ್ಳುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲಾ ಕಾನೂನುಗಳಿಗೆ ತಾಯಿ ಸಂವಿಧಾನ ವಾಗಿದ್ದು ಧರ್ಮಗಳ ಆಧಾರ, ಸಮಾಜವಾದ, ವ್ಯವಹಾರ, ಮನುಷ್ಯತ್ವ, ಸ್ಥಾನಮನ ಎಲ್ಲವನ್ನೂ ಒಳಗೊಂಡಿದ್ದು, ಏಕತೆ ಸಾರುವ ವೈಶಿಷ್ಠತೆ ನಮ್ಮ ಸಂವಿಧಾನ ಹೊಂದಿದೆ ಎಂದರು.
ತಹಶೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು ಎಂದರು.
ಸಮಾರಂಭದಲ್ಲಿ ತಾಪಂ ಇಒ ಮಲ್ಲಾನಾಯ್ಕ, ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ವಕೀಲರ ಸಂಘದ ಹನುಮಂತಪ್ಪ ಪರಮೇಶ್ವರಪ್ಪ, ಬಸವರಾಜ್, ಕೆ.ಎಂ ಕರಿಬಸಯ್ಯ, ತಿಪ್ಪೇಸ್ವಾಮಿ ಟಿ, ಬಸವರಾಜ್, ಆರ್. ಓಬಳೇಶ್, ಡಿ. ಶ್ರೀನಿವಾಸ ಸೇರಿದಂತೆ ವಕೀಲರು ವಿವಿಧ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.