ಪರಿಸರದ ಸ್ಥಿರತೆಗೆ ಮರ ಗಿಡಗಳೇ ಸಹಕಾರಿ

38ನೇ ವಾರ್ಡಿನ ಕಾಸಲ್‌ ಶ್ರೇಷ್ಠಿ ಉದ್ಯಾನವನದಲ್ಲಿನ ವನ ಮಹೋತ್ಸವದಲ್ಲಿ ನಗರ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್

ದಾವಣಗೆರೆ, ನ.27- ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‌ – 38ನೇ ವಾರ್ಡ್‌ನ ಕಾಸಲ್‌ ಶ್ರೇಷ್ಠಿ ಉದ್ಯಾನವನದಲ್ಲಿ (ಟ್ಯಾಂಕ್‌ ಪಾರ್ಕ್‌) ಆರ್‌.ಟಿ.ಇ. ಸಪ್ತಾಹದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್‌ ಅವರು ಇಂದು ಚಾಲನೆ ನೀಡಿದರು.

ನಂದ ವೆಂಕಟೇಶ್‌ ಆನೆಗುಂದಿ, ವೆಂಕಟೇಶ್‌ ಆನೆಗುಂದಿ, ಚೇತನ್‌ ಪಲ್ಲಾಗಟ್ಟೆ, ನಟರಾಜ್‌ ಬೆಳ್ಳೂಡಿ, ಡಿ. ಸುಹಾಶ್‌, ಸುಧೀರ್‌, ಅಭಿಷೇಕ್‌ ಶೇಟ್‌, ಮಧು ರೆಡ್ಡಿ, ಸುಹಾಸ್‌ ಎನ್, ಅವಿನಾಶ್‌ ಪಾಟೀಲ್, ಎಸ್‌. ಶ್ರೀನಿವಾಸ್‌, ಮಂಜುನಾಥ್ ಗಡಿಗುಡಾಳ್‌, ಸಂಧ್ಯಾ ಕಾರ್ತಿಕ್, ಮರಿಯಾ, ರಜನಿ, ವಿದ್ಯಾ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್‌ ಗಡಿಗುಡಾಳ್‌,  ಮುಂದಿನ ಪೀಳಿಗೆಗೆ ಪರಿಸರ ಉಳಿಸಿ, ಬೆಳೆಸಿಕೊಡಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪರಿಸರದ ಸ್ಥಿರತೆಗೆ ಮರಗಿಡಗಳೇ ಸಹಕಾರಿ. ಮಾನವ ಸೇರಿ ಅನೇಕ ಪ್ರಾಣಿ, ಪಕ್ಷಿ ಮುಂತಾದ ಜೀವಿಗಳು ಪರಿಸರವನ್ನು ಅವಲಂಬಿಸಿ ಜೀವಿಸುತ್ತವೆ. ಪರಿಸರದ ಯಾವುದೇ ಒಂದು ಕೊಂಡಿ ಕಳಚಿದರೆ ಮಾನವನ ಬದುಕು ದುಸ್ತರವಾಗುತ್ತದೆ. ಕೆಲವು ಅತಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾರ್ವಜನಿಕ ಅನುಕೂಲತೆಗಾಗಿ ಮರ ಕಡಿಸುವ ಸಂದರ್ಭ ಎದುರಾಗುತ್ತದೆ. ಇದಕ್ಕೆ ಪರಿಸರವಾದಿಗಳು ವಿರೋಧಿಸಿದಾಗ ಅಲ್ಲಿ ಜರುಗಬೇಕಾದ ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ಮರ ಕಡಿದರೂ ಹತ್ತು ಹಲವು ಸಸಿಗಳನ್ನು ನೆಟ್ಟು, ಪೋಷಿಸಿ, ಬೆಳೆಸಿ ವಾರ್ಡನ್ನು ಹಸಿರೀಕರಣ ಮಾಡಲಾಗಿದೆ. 

ಈಗಾಗಲೇ ಹಿಂದೆ ನೆಟ್ಟಂತಹ ಸಸಿಗಳು ಬೆಳೆದು ನಿಂತಿವೆ ಹಾಗೂ ಹೊಸ ಸಸಿಗಳನ್ನು ನೆಟ್ಟು ಹಸಿರು ಪರಿಸರವನ್ನು ಬೆಳೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾರ್ಡ್‌ ಸಂಪೂರ್ಣ ಹಸಿರಿನಿಂದ ಕೂಡಿರುವುದರಲ್ಲಿ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

error: Content is protected !!