ದಾವಣಗೆರೆ, ನ.24- ಸರ್ಕಾರವು ಮರಾಠಿಗರ ಅಭಿ ವೃದ್ಧಿಗೆ ಸಮುದಾಯ ನಿಗಮ ವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ನಿಗಮಕ್ಕೆ ವಿರೋಧ ಸಲ್ಲದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಹೇಳಿದ್ದಾರೆ.
ಬೆಳಗಾವಿ ಗಡಿಭಾಗದಲ್ಲಿ ಕೆಲ ಪುಂಡರು ಮಹಾರಾಷ್ಟ್ರದ ರಾಜಕಾರಣಿಗಳ ಕುಮ್ಮಕ್ಕಿನಿಂದ ಕಿರಿಕ್ ಮಾಡುತ್ತಿದ್ದಾರೆ. ಇವರಿಗೆ ತಕ್ಕ ಶಾಸ್ತಿ ಮಾಡಬೇಕು. ಈ ಭಾಗದಲ್ಲಿ ಬಿಟ್ಟು ಬೇರೆಲ್ಲಾ ಭಾಗದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಕನ್ನಡಿಗರಾಗಿಯೇ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಯಾರೋ ಮಾಡಿದ ತಪ್ಪಿಗೆ ಇಡೀ ಮರಾಠಿಗರನ್ನೇ ವಿರೋಧಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.