ದಾವಣಗೆರೆ, ನ.24- ನಾಡಿದ್ದು ದಿನಾಂಕ 26 ರಂದು ದೇಶದ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರ ಬೆಂಬಲವಾಗಿ ನಗರದಲ್ಲಿಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ವತಿಯಿಂದ ನಗರದ ರೈಲ್ವೇ ನಿಲ್ದಾಣ ಹಾಗೂ ಎಪಿಎಂಸಿ ಮಾರ್ಕೆಟ್ ಮುಂದೆ ಇಂದು ಬೀದಿ ಬದಿ ಬಹಿರಂಗ ಸಭೆ ನಡೆಸಲಾಯಿತು.
ಆ ಮುಖೇನ ವಿದ್ಯಾರ್ಥಿ ವಿರೋಧಿ, ಕಾರ್ಪೊರೇಟ್-ಪರ ಹೊಸ ಶಿಕ್ಷಣ ನೀತಿ-2020 ತಿರಸ್ಕರಿಸಲಾಯಿತು.
ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರಾದ ನಾಗಜ್ಯೋತಿ ಮಾತನಾಡಿ, ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಶಿಕ್ಷಣದಿಂದ ಈಗಾಗಲೇ ವಂಚಿತರಾಗಿರುವ ದೇಶದ ಅಸಂಖ್ಯಾತ ಬಡ ಮಕ್ಕಳು ಈ ನೀತಿಯಿಂದಾಗಿ ಶಿಕ್ಷಣದಿಂದ ಮತ್ತಷ್ಟು ದೂರ ತಳ್ಳಲ್ಪಡುತ್ತಾರೆ. ಸರ್ಕಾರವು ಈ ನೀತಿಯ ಮೂಲಕ ದೊಡ್ಡ ಉದ್ಯಮಪತಿಗಳಿಗೆ, ಕಾರ್ಪೊರೇಟ್ ಮನೆತನಗಳಿಗೆ ಶಿಕ್ಷಣದಲ್ಲಿ ಬಂಡವಾಳ ಹೂಡಿ ಮತ್ತಷ್ಟು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ, ಜನ ವಿರೋಧಿ ಹೊಸ ಶಿಕ್ಷಣ ನೀತಿ ವಿರೋಧಿಸಿ ಎಐಡಿಎಸ್‍ಓ ಸಂಘಟಿಸಿದ್ದ ಸಹಿ ಸಂಗ್ರಹದಲ್ಲಿ ಇಡೀ ದೇಶದಾದ್ಯಂತ ಲಕ್ಷಾಂತರ ಸಹಿಗಳು ಸಂಗ್ರಹವಾಗಿವೆ. ದೇಶದ ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಸಹಿ ನೀಡುವುದರ ಮೂಲಕ ಹೊಸ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮುಷ್ಕರಕ್ಕೆ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ನಾಗಜ್ಯೋತಿ ಮತ್ತು ಕಿರಣ್, ಜಂಟಿ ಕಾರ್ಯದರ್ಶಿ
ಕಾವ್ಯ, ಸಂಘಟನಾಕಾರರಾದ ಪುಷ್ಪ ಮತ್ತು ಸುಮನ್ ಇದ್ದರು.