ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯು ತನ್ನ 26ನೇ ವಾರ್ಷಿಕೋತ್ಸವ ಮತ್ತು 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಅಂತರ್ಜಾಲದ ಮೂಲಕ ಇಂದು ನಡೆಯಲಿದೆ. ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಡಾ. ನಾಗಮ್ಮ ಕೇಶವಮೂರ್ತಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಎಸ್.ಎಂ. ಮಲ್ಲಮ್ಮ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಧ್ಯಾ ರೆಡ್ಡಿ, ಶ್ರೀಮತಿ ವನಮಾಲಾ ಸಂಪನ್ನಕುಮಾರ್ ಮತ್ತು ಎಂ.ಎಸ್. ವಿಕಾಸ್ ಅವರು ಉಪಸ್ಥಿತರಿರು ವರು. ಓಂಕಾರಮ್ಮ ರುದ್ರಮುನಿ ಸ್ವಾಮಿ ಅತಿಥಿಗಳ ಪರಿಚಯ ಮಾಡಲಿದ್ದಾರೆ.
ಡಾ. ಸಂಧ್ಯಾ ರೆಡ್ಡಿ : ಜಾನಪದ ಕ್ಷೇತ್ರ ವನ್ನೇ ತಮ್ಮ ಸಂಶೋಧನೆಗಾಗಿ ಆಯ್ಕೆಮಾಡಿ ಕೊಂಡು ಪಿ.ಹೆಚ್.ಡಿ.ಯನ್ನು ಜಾನಪದ ತಜ್ಞರಾದ ಡಾ. ಸಂಧ್ಯಾ ರೆಡ್ಡಿ ಪಡೆದಿ ದ್ದಾರೆ. ತಾಯಿ ಅನುಸೂಯ ರಾಮರೆಡ್ಡಿ ಅವರು ಉತ್ತಮ ಬರಹಗಾರ್ತಿಯಾಗಿದ್ದು, ಹಿರಿಯ ಸಾಹಿತಿ ಟಿ. ಗಿರಿಜ ಸಂಪರ್ಕದಲ್ಲಿದ್ದವರು. ಸಂಧ್ಯಾ ಅವರು ಕಥೆ, ಕವಿತೆ, ಜಾನಪದ, ಅನುವಾದ, ಮಹಿಳಾ ಅಧ್ಯಯನ, ಅಂಕಣ ಬರಹ ಮೊದಲಾದ ಪ್ರಕಾರಗಳಲ್ಲಿ 60 ಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಧ್ಯಾ ಅವರ ಅನುತವಾದಿತ ಕೃತಿಗಳಾದ `ಬರ್ಕ್ ವೈಟ್ ಕಂಡ ಭಾರತ’, `ಕರೇವಾಲ’, `ಪ್ರಾಣಾ ಯಾಮ ಯೋಗ ಮುದ್ರಾ’ ಕೃತಿಗಳು ಅಪಾರ ಜನಮನ್ನಣೆ ಗಳಿಸಿವೆ.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ, ಕ.ಲೇ.ಸಂ. ನ ಅಧ್ಯಕ್ಷರಾಗಿ, ಕನ್ನಡ ಜಾನಪದ ವಿ.ವಿ.ಯ ಜಾನಪದ ನಿಘಂಟುವಿನ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಜಾನಪದ ಅಕಾಡೆಮಿಯ ಡಾ. ಜೀ.ಶಂ.ಪ. ಪ್ರಶಸ್ತಿ, ಕ. ಸಾ. ಪ. ದ ಮಲ್ಲಿಕಾ ಪ್ರಶಸ್ತಿ, ಮಂಡ್ಯದ ಜನದನಿ, ಮಿಥಿಕ್ ಸೊಸೈಟಿಯ ಉತ್ತಮ ಸಂಶೋಧಕಿ ಪ್ರಶಸ್ತಿಗಳಲ್ಲದೇ, ಇನ್ನೂ ಅನೇಕ ಗೌರವಗಳು ಲಭಿಸಿವೆ. ಭಾಷಾಂತರ ಕನ್ನಡ ವಿಭಾಗದಲ್ಲಿ ಉಪನಿರ್ವಾಹಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ವನಮಾಲಾ ಸಂಪನ್ನ ಕುಮಾರ್ : ಮೂಲತಃ ಉಡುಪಿ, ಕುಂದಾಪುರದವರಾದ ವನಮಾಲ ವಿವಾಹ ನಂತರ ಬೆಂಗಳೂರಿಗೆ ಬಂದವರು. ಪ್ರಸ್ತುತ ಕ.ಲೇ.ಸಂ. ನ ಅಧ್ಯಕ್ಷರಾಗಿದ್ದಾರೆ. ಸಂಘದ ಘಟಕಗಳ ವಿಸ್ತರಣೆಯ ಮೂಲಕ ಹಿರಿಯ-ಕಿರಿಯ ಮತ್ತು ಉದಯೋನ್ಮುಖ ಲೇಖಕಿ ಯರ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ಒದಗಿಸಿದ್ದಾರೆ. ವಾಸಂತಿ ಪಡುಕೋಣೆ ಯವರ ಜೀವನ ಚರಿತ್ರೆ ಇವರ ಮುಖ್ಯ ಕೃತಿ.
ಉದಯೋನ್ಮುಖರ ಕವಿತೆಗಳ ಸಂಕಲನವನ್ನು ಸಂಪಾದನೆ ಮಾಡಿದ್ದಾರೆ. ಲೇಖಕಿಯರ ಆತ್ಮಕಥಾನಕಗಳಾದ `ನಮ್ಮ ಬದುಕಿನ ಪುಟಗಳು’ ಮತ್ತು `ನಮ್ಮ ಬದುಕು, ನಮ್ಮ ಬರಹ’ ಕೃತಿಗಳ ಸಹ ಸಂಪಾದಕ ರಾಗಿದ್ದಾರೆ. ಕ.ಲೇ.ಸಂ.ನ ಕಾರ್ಯದರ್ಶಿ ಯಾಗಿ ಮತ್ತು ಉಪಾಧ್ಯಕ್ಷೆ ಯಾಗಿ ಸುಮಾರು 15 ವರ್ಷಗಳಿಂದಲೂ ಸೇವೆ ಸಲ್ಲಿಸು ತ್ತಿರುವ ವನಮಾಲಾ, ಬೆಂಗಳೂರು ಬಂಟರ ಸಂಘದ `ಸ್ನೇಹ ಚಿಂತನ’ ಮಾಸಿಕದ ಸಂಪಾದಕ ಮಂಡಳಿಯಲ್ಲಿಯೂ ಕ್ರಿಯಾಶೀಲರಾಗಿ ದ್ದಾರೆ. ಆಕಾಶವಾಣಿಯ ಅನೇಕ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾದ ಸಂಕಷ್ಟ ಸಮಯದಲ್ಲೂ ಕ.ಲೇ.ಸಂ.ಚಟು ವಟಿಕೆಗಳ ವೆಬಿನಾರ್‌ಗಳನ್ನು ನಡೆಸುತ್ತಿದ್ದಾರೆ.
ಎಂ. ಎಸ್. ವಿಕಾಸ್ : ಮಧ್ಯ ಕರ್ನಾಟಕದ ಹೆಸರಾಂತ ದಿನಪತ್ರಿಕೆ `ಜನತಾವಾಣಿ’ ಸಂಪಾದಕರಾದ ಎಂ.ಎಸ್. ವಿಕಾಸ್ ಅವರು ಪತ್ರಿಕೆಯ ಸಂಸ್ಥಾಪಕ ಸಂಪಾದಕರಾ ಗಿದ್ದ ದಿ. ಹೆಚ್.ಎನ್ ಷಡಾಕ್ಷರಪ್ಪ ಅವರ ಪುತ್ರ. ಅನುಭವ ಮಂಟಪ, ಸಿದ್ಧಗಂಗಾ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದು, ಪದವಿ ಪೂರ್ವ, ಪದವಿ ಯನ್ನು ಮೈಸೂರಿನಲ್ಲಿ ಪತ್ರಿಕೋದ್ಯಮದ ಸ್ನಾತ ಕೋತ್ತರ ಪದವಿ ಪಡೆದವರು.
25 ವರ್ಷಗಳಿಂದಲೂ ತಂದೆಯವರು ಪ್ರೋತ್ಸಾಹದಾಯಕವಾಗಿ ಕೊಡಮಾಡುತ್ತಿದ್ದ `ಹೊನ್ನೇನಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೇಕಟ್ಟೆ’ ಪ್ರಶಸ್ತಿಯನ್ನು ಅಷ್ಟೇ ಅಭಿಮಾನದಿಂದ ಮುಂದುವರಿಸಿಕೊಂಡು ಬಂದು, ಪ್ರತಿ ವರ್ಷ ಆಯ್ದ ಓರ್ವ
ಮಹಿಳಾ ಬರಹಗಾರ್ತಿಯನ್ನು ಪುರಸ್ಕರಿಸುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಒಪ್ಪಿಕೊಂಡು, ಈ ವರ್ಷದ ಪುರಸ್ಕಾರವನ್ನು, ಮುಂದಿನ ವರ್ಷದ ಪುರಸ್ಕಾರದೊಂದಿಗೆ ಒಟ್ಟಿಗೇ ನೀಡುತ್ತಿದ್ದಾರೆ.
ಹಾಗೆಯೇ ಜಯಮ್ಮ ನೀಲಗುಂದ, ಭಾಗ್ಯಲಕ್ಷ್ಮಿ ಸು. ಅಮೃತಾಪುರ, ಸಂಧ್ಯಾ ಸುರೇಶ್, ಸುನೀತಾ ಪ್ರಕಾಶ್, ಉಮಾ ಮಹದೇವ್, ಡಾ ರೂಪಾ ಶಶಿಕಾಂತ್ ಅವರುಗಳು ಸ್ವರಚಿತ ಕವನಗಳ ವಾಚನ ಮಾಡಲಿದ್ದಾರೆ. ಎನ್.ಎಸ್. ಗಿರಿಜಾ ಸಿದ್ಧಲಿಂಗಪ್ಪ, ಸುನಿತಾ ರಾಜು, ಸೀತಾ ಎಸ್. ನಾರಾಯಣ, ಜಯಲಕ್ಷ್ಮಿ ಮಲ್ಲನಗೌಡರ ಅವರುಗಳು ತಮ್ಮ ಆಯ್ಕೆಯ ಗಾದೆಗಳ ವಿಸ್ತರಣೆ ಮಾಡುತ್ತಾರೆ. ಇವುಗಳ ಕುರಿತು ಅರುಂಧತಿ ರಮೇಶ್ ಹೇಳಲಿದ್ದಾರೆ.
ವೀಣಾ ಕೃಷ್ಣಮೂರ್ತಿ ಅವರ ಸ್ವಾಗತ, ಹೆಚ್.ಕೆ. ಸತ್ಯಭಾಮ ಮಂಜುನಾಥ್ ಮತ್ತು ಸಂಗಡಿಗರ ನಾಡಗೀತೆ ಕಾರ್ಯಕ್ರಮದ ಮುಖ್ಯ ಭಾಗಗಳಾಗಿದ್ದು, ಪ್ರಬಂಧ ಸ್ಪರ್ಧೆಯ ಮೂರೂ ವಿಭಾಗಗಳ ಫಲಿತಾಂಶಗಳನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು.
ಇಂದು ಸಂಜೆ 4 ಘಂಟೆಗೆ ಇಡೀ ಕಾರ್ಯಕ್ರಮವು ಯೂಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
ಸಾಹಿತ್ಯಾಸಕ್ತರು https://www.youtube.com/channel/UC4jm_VQWwSCZ8B_yf9ZXFcQ ಲಿಂಕನ್ನು ಬಳಸಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.
-ಅರುಂಧತಿ ರಮೇಶ್