ಶರಣ ಸಂಸ್ಕೃತಿ ಉಳಿಸಿ, ಬೆಳೆಸಲು ಬಕ್ಕಪ್ಪ ಕರೆ

ಶರಣ ಸಂಸ್ಕೃತಿ ಉಳಿಸಿ, ಬೆಳೆಸಲು ಬಕ್ಕಪ್ಪ ಕರೆ - Janathavaniದಾವಣಗೆರೆ, ನ.14- `ಅರಿದೊಡೆ ಶರಣ,  ಮರೆದೊಡೆ ಮಾನವ’ ಎನ್ನುವಂತಹ ಮಾತಿದೆ. ಶರಣರನ್ನು ಮರಣದಲ್ಲಿ ನೋಡು ಎನ್ನುವುದು ಶರಣ ವಿಶೇಷತೆಗೆ ಸಾಕ್ಷಿಯಾಗಿದೆ ಎಂದು ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ತಿಳಿಸಿದರು. 

ದಾವಣಗೆರೆ ತಾಲ್ಲೂಕು ಕಸಾಪ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಅಂತರ್ಜಾಲ ಕನ್ನಡ ನುಡಿಹಬ್ಬದ 9ನೇ ದಿನದ ಉಪನ್ಯಾಸ ಮಾಲಿಕೆಯಲ್ಲಿ `ಶರಣ ಸಂಸ್ಕೃತಿ’ ವಿಷಯ ಕುರಿತು ಅವರು ಮಾತನಾಡಿದರು.

`ಶರಣ’ ಎಂದರೆ ಶಿವನಿಗೆ ಶರಣು ಹೋದವನು,  ಭಕ್ತ,  ಲಿಂಗವಂತ ಎಂದೆನ್ನಬಹುದು.  ಶರಣರ ಕುರಿತು ಜಾನಪದರು ಶರಣಾರ ನೆನೆದರೆ ಸರಗೀಯ ಇಟ್ಟಂಗೆ, ಹರಗವಲ್ಲಿಗೆ ಮೂಡಿದಂಗೆ,  ಕಲ್ಯಾಣದ ಶರಣಾರ ನೆನೆಯೋ ನನ ಮನವೇ ಎಂದು ಶರಣರ ಹಿರಿಮೆ, ಗರಿಮೆ ಯನ್ನು ಜನಪದರು ಕೊಂಡಾಡಿದ್ದಾರೆ ಎಂದು ನೆನಪಿಸಿದರು. 

ಶರಣ ಸಂಸ್ಕೃತಿ ಎಂದರೆ ಕಾಯಕ ದಾಸೋ ಹದ ಸಂಸ್ಕೃತಿ. ನಾವು ಶರಣರನ್ನು ಗುರುತಿಸು ವುದು ಅವರ ಕಾಯಕದಿಂ ದಲೇ. ಉದಾಹರಣೆಗೆ ಅಂಬಿಗರ ಚೌಡಯ್ಯ, ಡೋ ಹರ ಕಕ್ಕಯ್ಯ, ಮಾದಾರ ಚೆನ್ನಯ್ಯ,  ಮಡಿವಾಳ ಮಾಚಯ್ಯ ಹೀಗೆ ಅವರ ಕಾಯಕದಿಂದಲೇ ಗುರುತಿಸುತ್ತೇವೆ. ಶರಣ ಸಂಸ್ಕೃತಿ ಕಾಯಕ ಪ್ರಧಾನ ವಾದಂತಹ ಸಂಸ್ಕೃತಿ. ಕಾಯಕದಲ್ಲಿ ನಿರತನಾದಡೆ ಗುರುವಾದರೂ  ಮರೆಯಬೇಕು ಲಿಂಗವಾದರೂ ಮರೆಯಬೇಕು, ಜಂಗಮದ ಹಂಗನ್ನೂ ತೊರೆಯ ಬೇಕು. ಸತ್ಯಶುದ್ಧ ಕಾಯಕದಿಂದ ಮಾಡಿರುವಂತಹ  ಕಾಯಕವು ಶಿವನಿಗೆ ಅರ್ಪಣೆ ಮಾಡುತ್ತದೆ ಎಂಬುವುದು ಶರಣ ಸಂಸ್ಕೃತಿ ಎಂದು ಹೇಳಿದರು. 

ಇದರ ಜೊತೆಗೆ ದಾಸೋಹವೂ ಕೂಡ ಶರಣ ಸಂಸ್ಕೃತಿಯಲ್ಲಿ ಮೇಳೈಸಿಕೊಂಡಿದೆ. ಕರುಣೆ,  ಅನು ಕಂಪ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವಂತಹ ಸಂಸ್ಕೃತಿಯೆಂದರೆ ಅದು ಶರಣ ಸಂಸ್ಕೃತಿಯಾಗಿದೆ ಎಂದು ಬಕ್ಕಪ್ಪ ಮಾರ್ಮಿಕವಾಗಿ ವಿವರಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, 12ನೇ ಶತಮಾನದ ಶರಣರು ಅಂದು  ಸಮಾಜದಲ್ಲಿ ಇದ್ದಂತಹ ಅಸಮಾನತೆ,  ಅಸ್ಪೃಶ್ಯತೆ,  ಜಾತಿಪದ್ಧತಿ,  ಮೂಢನಂಬಿಕೆ, ಅಜ್ಞಾನ,  ಇವುಗಳ ವಿರುದ್ಧ ಜನರಿಗೆ ಅರಿವು ಮೂಡಿಸುತ್ತಾ, `ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ’ ಎನ್ನುವಂತೆ ಸರ್ವರೂ ಸಮಾನರು ಎಂಬುದನ್ನು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡಿದರು ಎಂದು ತಿಳಿಸಿದರು.  

ಸಪ್ತಸ್ವರ ಸಂಗೀತ ತಂಡದ ಮುಖಂಡರಾದ ಸಂಗೀತ ಮಾಸ್ತರ್ ರೇವಣಸಿದ್ದಪ್ಪ ಮತ್ತು ಅವರ ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

error: Content is protected !!