ಕುಟುಂಬದ ಸಮತೋಲನ, ಬೆಳವಣಿಗೆಯಲ್ಲಿ ಹೆಣ್ಣಿನ ಶ್ರಮ ಶ್ಲ್ಯಾಘನೀಯ

ಕುಟುಂಬದ ಸಮತೋಲನ, ಬೆಳವಣಿಗೆಯಲ್ಲಿ ಹೆಣ್ಣಿನ ಶ್ರಮ ಶ್ಲ್ಯಾಘನೀಯ - Janathavani

ಕರ್ನಾಟಕ ಲೇಖಕಿಯರ ಸಂಘದ ದಾವಣಗೆರೆ ಘಟಕದ ಅಂತರ್ಜಾಲದಲ್ಲಿ ಸ್ವರಚಿತ ಭಾವಗೀತೆ ಗಾಯನ ಕಾರ್ಯಕ್ರಮದಲ್ಲಿ ಸಾಹಿತಿ ಪದ್ಮಾ ಶ್ರೀಧರ್

ದಾವಣಗೆರೆ, ನ.11- ಕರ್ನಾಟಕ ಲೇಖಕಿಯರ ಸಂಘದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ 65 ನೇ  ಕರ್ನಾಟಕ ರಾಜ್ಯೋತ್ಸವದ ನಿಮಿತ್ತ್ಯ ಅಂತರ್ಜಾಲ ಸ್ವರಚಿತ ಗೀತ ಗಾಯನ ಕಾರ್ಯ ಕ್ರಮವನ್ನು ನಿನ್ನೆ ನಡೆಸಲಾಯಿತು. 

ಕರ್ನಾಟಕ ಲೇಖಕಿಯರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷರಾದ ಶ್ರೀಮತಿ ವೀಣಾ ಕೃಷ್ಣಮೂರ್ತಿ ದೇವಿ ಸ್ತುತಿಯನ್ನು ಹಾಡುವುದರ ಮೂಲಕ  ಸ್ವಾಗತಿಸಿದರು. 

ಹರಿಹರದ ದೊಡ್ಡಮ್ಮ ಎಂದೇ ಹೆಸರಾ ಗಿರುವ ಹಿರಿಯ ಸಾಹಿತಿ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಸಾವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಆಚೆ ಇನ್ನೊಂದು ಜವಾ ಬ್ದಾರಿಯಿದೆ. ಅದು ನಮ್ಮ ಕನ್ನಡ ಸಾಹಿ ತ್ಯವನ್ನು ಉಳಿಸಿ ಬೆಳೆಸುವುದು. ಅದನ್ನು ಪ್ರತಿಯೊಬ್ಬರೂ ನಿರ್ವಹಿಸಲೇ ಬೇಕು ಎಂದು ಹಿತ ನುಡಿದರು.

ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದ್ದು ದಾಸರು, ಶರಣರು ಹಾಗೂ ಹಿರಿಯ ಕವಿವರೇಣ್ಯರು ಅಷ್ಟೇ ಅಲ್ಲದೇ, ಜಾನಪದ ಕ್ಷೇತ್ರ ಸಾಕಷ್ಟು ಕೊಡುಗೆ ನೀಡಿದೆ. ಇತ್ತೀಚೆಗೆ ವನಿತೆಯರೂ ಸಹ ಕನ್ನಡ ನಾಡು, ನುಡಿ, ಸಂಸ್ಕೃತಿಯ ಉಳಿವಿಗೆ, ಏಳ್ಗೆಗೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದಾವಣಗೆರೆಯ ವನಿತಾ ಸಾಹಿತ್ಯ ವೇದಿಕೆ ಹಾಗೂ ಜಿಲ್ಲಾ ಲೇಖಕಿಯರ ಸಂಘ ನಡೆಸುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿ ಎಂದು ಲಲಿತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. 

ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರಾದ ಶ್ರೀಮತಿ ಮಲ್ಲಮ್ಮ ನಾಗರಾಜ್ ಅವರು ತಮ್ಮ ಆಶಯ ನುಡಿಗಳಲ್ಲಿ, 8 ಜ್ಞಾನಪೀಠಗಳನ್ನು ಪಡೆದ ನಮ್ಮ ಕನ್ನಡ ಭಾಷೆಯು ನಿಜಕ್ಕೂ ಶ್ರೇಷ್ಠ. ಕನ್ನಡ ಸಾಹಿತ್ಯವನ್ನು ತಮ್ಮ ಪದಪುಂಜಗಳಿಂದ ಶ್ರೀಮಂತಗೊಳಿಸಿದ ಕುವೆಂಪು, ಬೇಂದ್ರೆ, ಮಾಸ್ತಿ ಇನ್ನೂ ಹಲವಾರು ಮೇರು ಕವಿಗಳಿಗೆ ಪ್ರಣಾಮಗಳನ್ನು ಸಲ್ಲಿಸಿದರು. 

ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಶ್ರೀಮತಿ ಅರುಂಧತಿ ರಮೇಶ್‍ ಅವರು, ತಮ್ಮ ಮನದ ಮಾತು ಶೀರ್ಷಿಕೆಯಲ್ಲಿ ಹೊರ ದೇಶದ ನೋಟಿನಲ್ಲಿ ಕನ್ನಡದ ಉಲ್ಲೇಖವಿದೆ, ಕನ್ನಡಕ್ಕೆ ಹೆಚ್ಚಿನ ಮಹತ್ವವಿ ದೆ. ಕನ್ನಡಾಭಿಮಾನ ಮಾತ್ರವಲ್ಲ, ಕನ್ನಡಿಗರ ಸ್ವಾಭಿಮಾನ ಎಚ್ಚರಗೊಳ್ಳಬೇಕು. ಕನ್ನಡಿಗರು ತಮ್ಮ ಕೈಯಿಂದ ಕನ್ನಡ ಸೋರಿ ಹೋಗದಂತೆ ಎಚ್ಚರ ವಹಿಸಬೇಕು. ಕನ್ನಡ ಭಾಷೆ ನಮ್ಮ ರಾಜ್ಯದಲ್ಲಿ ಪ್ರಧಾನವಾಗಿರ ಬೇಕು. ಯಾವ ಭಾಷೆಗಳು ಎಷ್ಟೇ ಪ್ರಾಮುಖ್ಯತೆ ಪಡೆದರೂ ಕನ್ನಡ ಎಂದಿಗೂ ಮುಂಚೂಣಿಯಲ್ಲಿರಬೇಕು. ಕನ್ನಡದ ದೀಪ ಎಂದಿಗೂ ವಿಶ್ವದೆಲ್ಲೆಡೆ ಬೆಳಗಬೇಕು, ಪ್ರಜ್ವ ಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಮತ್ತೋರ್ವ ಮುಖ್ಯ ಅತಿಥಿ – ಬೆಂಗಳೂರಿನ ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ರಾಜ್ಯ ಸಂಚಾಲಕರಾದ ಶ್ರೀಮತಿ ಪದ್ಮಾ ಶ್ರೀಧರ್ ಅವರು ಮಹಿಳೆ, ಸಮಾಜ ಮತ್ತು ಸಾಹಿತ್ಯ ಎನ್ನುವ ಶೀರ್ಷಿಕೆಯಡಿ ಹೆಣ್ಣು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾಳೆ. ಸಮಾಜದಲ್ಲಿ ಒಂದು ಚಿಕ್ಕ ಘಟಕವೆಂದರೆ ಕುಟುಂಬ. 

ಆ ಕುಟುಂಬದ ಸಮತೋಲನ ಮತ್ತು ಸರ್ವತೋಮುಖ ಬೆಳವಣಿಗೆಗೆ ಹೆಣ್ಣಿನ ಶ್ರಮ ಶ್ಲಾಘನೀಯ. ಮಕ್ಕಳಿಗೆ ಸಂಸ್ಕಾರ, ಆಚಾರ ವಿಚಾರಗಳನ್ನು ನೀಡುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದ್ದಾಳೆ. ಕನ್ನಡದ ಮೊದಲ ಮಹಿಳಾ ಸಾಹಿತಿ ಅಕ್ಕಮಹಾದೇವಿಯ ವರಿಂದ ಹಿಡಿದು ಇಂದಿನ ಉದಯೋನ್ಮುಖ ಕವಯತ್ರಿಯರೆಲ್ಲರೂ ಸಾಹಿತ್ಯವನ್ನು ಪೋಷಿಸು ವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿ ದ್ದಾರೆಂದು ಅವರಿಗೆ ಅಭಿನಂದಿಸಿದರು.

ಸ್ವರಚಿತ ಗೀತ ಗಾಯನದಲ್ಲಿ ಭಾಗವಹಿಸಿದ ಕಲೇಸಂ ಸದಸ್ಯೆಯರ ಪ್ರತಿಯೊಂದು ಕವಿತೆಗಳನ್ನು ಅತ್ಯಂತ ಭಾವನಾತ್ಮಕವಾಗಿ ಮತ್ತು ಮನೋಜ್ಞವಾಗಿ ಹಿರಿಯ ಸಾಹಿತಿ ಶ್ರೀಮತಿ ಭಾಗ್ಯಲಕ್ಷ್ಮಿ ಸು. ಅಮೃತಾಪುರ ವಿಶ್ಲೇಷಣೆ ಮಾಡಿದರು. ಪ್ರತಿಯೊಂದು ಕವಿತೆಗಳನ್ನು ಆಸ್ವಾದಿಸಿ ಹೆಮ್ಮೆಯಿಂದ ಹರಸಿ ಶುಭ ಕೋರಿದರು.

ಕರ್ನಾಟಕ ಲೇಖಕಿಯರ ಸಂಘದ 7 ಸದಸ್ಯೆಯರು ಕಾರ್ಯಕ್ರಮದಲ್ಲಿ ಗೀತ ಗಾಯನ ಮಾಡಿ, ಕನ್ನಡದ ಹಿರಿಮೆ – ಗರಿಮೆಯನ್ನು ಕೊಂಡಾಡಿ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಫಲರಾದರು. 

ಕಾರ್ಯಕ್ರಮದಲ್ಲಿ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್‌ ವಂದಿಸಿ ದರು. ಉದಯೋನ್ಮುಖ ಕವಯತ್ರಿಯರಿಗೆ ಹೆಚ್ಚು ಹೆಚ್ಚು ಸಾಹಿತ್ಯದಲ್ಲಿ ತೊಡಗಲು ಪ್ರೇರೇಪಿಸುತ್ತಿರುವ ಶ್ರೀಮತಿ ವೀಣಾ ಕೃಷ್ಣಮೂರ್ತಿ ಅವರ ಶ್ರಮಕ್ಕೆ ಭಾಗ ವಹಿಸಿದ ಎಲ್ಲ ಸಹೃದಯರು ಮೆಚ್ಚುಗೆ ವ್ಯಕ್ತಪಡಿಸಿ  ಅಭಿನಂದನೆ ಸಲ್ಲಿಸಿದರು.

ಹಿರಿಯ ಸಾಹಿತಿ ಶ್ರೀಮತಿ ಭಾಗ್ಯಲಕ್ಷ್ಮಿ ಸು. ಅಮೃತಾಪುರ ಅವರು ಎಲ್ಲಾ ಸ್ವರಚಿತ ಕವನಗಳನ್ನು ಮನೋಜ್ಞವಾಗಿ ವಿಮರ್ಶೆ ಮಾಡಿದರು. 

ಶ್ರೀಮತಿ ಸುನಿತಾ ಪ್ರಕಾಶ್, ಶ್ರೀಮತಿ ಗಿರಿಜಾ ಸಿದ್ಧಲಿಂಗಪ್ಪ, ಶ್ರೀಮತಿ ಕೋಮಲ ವಸಂತಕುಮಾರ್, ಶ್ರೀಮತಿ ಡಾ. ರೂಪ ಶಶಿಕಾಂತ್,  ಶ್ರೀಮತಿ ಸುನಿತಾ ರಾಜು, ಶ್ರೀಮತಿ ಸೀತಾ ನಾರಾಯಣ್, ಶ್ರೀಮತಿ ಐ.ಕೆ. ಉಮಾದೇವಿ ಅವರುಗಳು ಸ್ವರಚಿತ ಗೀತ ಕವಿಗಳಾಗಿದ್ದಾರೆ.

error: Content is protected !!