ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಶಿಕ್ಷಣಕ್ಕೆ ಕಾಯಕಲ್ಪ

ಹರಿಹರ ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ  ಶ್ಲ್ಯಾಘನೆ

ಹರಿಹರ, ನ.11- ಕೋವಿಡ್ 19 ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಗಗನ ಕುಸುಮದಂತಾಗಿದ್ದ ಶಿಕ್ಷಣವನ್ನು ಸುಗಮ ಗೊಳಿಸಲು ಶ್ರೀ ಧರ್ಮಸ್ಥಳ ಗ್ರಾಮೀಣಾಭಿ ವೃದ್ಧಿ ಯೋಜನೆಯಿಂದ ಕಾಯಕಲ್ಪ ದೊರೆ ತಂತಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಶ್ರೀಮತಿ  ಎಸ್. ಲಕ್ಷ್ಮಿ ಹೇಳಿದರು.

ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಜ್ಞಾನತಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ನಮ್ಮ ದೇಶವು ತಾಂತ್ರಿಕತೆಯಲ್ಲಿ ಹಿಂದುಳಿದಿತ್ತು. ಆದರೆ, ಜಾಗತೀ ಕರಣದಿಂದಾಗಿ  ಶಿಕ್ಷಣ ವ್ಯವಸ್ಥೆಯು ಹಂತ, ಹಂತ ವಾಗಿ ಅಭಿವೃದ್ಧಿ ಯ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವೆಲ್ಲಾ ಮನಗಾಣಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ, ಕಳೆದ ಹಲವಾರು ತಿಂಗಳಿನಿಂದ ತಾಲ್ಲೂಕಿ ನಲ್ಲಿರುವ ಶಾಲೆಗಳು ಇದುವರೆಗೂ ತೆರೆದಿಲ್ಲ. ಇದರಿಂದ ವಿದ್ಯಾರ್ಥಿ ಹಾಗೂ ಪೋಷಕರಿಗೆ ಒಂದು ರೀತಿಯ ಭಯ ಆವರಿಸಿತ್ತು. ಇದಕ್ಕೆ ಜೀವ ತುಂಬುವ ರೀತಿಯಲ್ಲಿ ನಮ್ಮ ಶಿಕ್ಷಕರು ಸಮುದಾಯ ಭವನ, ದೇವಾಲಯಗಳಲ್ಲಿ ಮಕ್ಕಳಿಗೆ ಪಾಠ-ಪ್ರವಚನ ಮಾಡುತ್ತಿದ್ದಾರೆ. ಕೋವಿಡ್ 19 ಅಧಿಕವಾಗಿ ಶಿಕ್ಷಕರಿಗೆ ಪರಿಣಾಮ ಬೀರುತ್ತಿದ್ದು, ಮನೆ ಮನೆ ಶಿಕ್ಷಣವನ್ನು ಕೈಬಿಡಲಾಯಿತು. ಆದರೆ ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯು ಅಪೂರ್ವ ವಾದ  ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್ ಟಾಪ್ ನಂತಹ ಆಧುನಿಕ ಉಪಕರಣಗಳನ್ನು ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಈ ಯೋಜನೆಯು ರಾಜ್ಯದಾದ್ಯಂತ ಜಾರಿಯಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯಲಿದ್ದಾರೆ. ಮತ್ತು ಸುಮಾರು 450ಕ್ಕೂ ಹೆಚ್ಚು ಗೌರವ ಶಿಕ್ಷಕರು ಸಹ  ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಜನಜಾಗೃತಿ ವೇದಿಕೆ ವಕೀಲ ಮಂಜುನಾಥ್, ಹಿರಿಯರಾದ ಬಾಬಣ್ಣ, ರಾಜಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!