ಹರಪನಹಳ್ಳಿ, ಆ.3- ಇಲ್ಲಿನ ಉಪವಿಭಾಗಾಧಿ ಕಾರಿ ವಿ.ಕೆ. ಪ್ರಸನ್ನಕುಮಾರ್ ಅವರು ಮಾಡಿದರೆನ್ನ ಲಾಗಿರುವ ಕಾನೂನು ಬಾಹಿರ ಆದೇಶಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಸ್ಥಳೀಯ ಜನಪರ ಸಂಘಟನೆಗಳ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಇಲ್ಲಿಯ ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಹೊಸಪೇಟೆ ರಸ್ತೆ ಮೂಲಕ ಮಿನಿವಿಧಾನ ಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.
ಈ ವೇಳೆ ಸಂಘಟನೆಯ ಮುಖಂಡ ಇದ್ಲಿ ರಾಮಪ್ಪ ಮಾತನಾಡಿ, ಹಿಂದೆ ವಿವಿಧ ಸಂಘಟನೆ ಗಳು ಹೋರಾಟ ಮಾಡಿದ್ದರ ಪರಿಣಾಮ ಸರ್ಕಾರ ಪ್ರಸನ್ನಕುಮಾರ್ ಅವರನ್ನು ವರ್ಗಾವಣೆ ಗೊಳಿ ಸಿತ್ತು. ಉಪವಿಭಾಗದ ಕಂದಾಯ ಆಡಳಿತ ನೆಲಕ ಚ್ಚಿದೆ ಎಂದು ದೂರಿದರು. ಪ್ರಸನ್ನ ಕುಮಾರ್ ಅವ ರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಆರ್. ತಿಮ್ಮಣ್ಣ, ಬಾಲಗಂಗಾಧರ, ಅಜ್ಜಪ್ಪ, ಮಹಂತೇಶ, ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.