ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ನಾಯಕ ರವೀಂದ್ರ

ಹರಪನಹಳ್ಳಿ, ನ.4-  ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ಧೀಮಂತ ನಾಯಕ ದಿ.ಎಂ.ಪಿ.ರವೀಂದ್ರ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಶ್ಲ್ಯಾಘಿಸಿದರು.

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಎಂ.ಪಿ.ರವೀಂದ್ರ ಅಭಿಮಾನಿಗಳ ಸಹಯೋಗದೊಂದಿಗೆ ಪಟ್ಟಣದ ನಟರಾಜ ಕಲಾ ಭವನದಲ್ಲಿ ಎಂ.ಪಿ.ರವೀಂದ್ರ ಅವರ 2ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬಡ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು. 

20-30 ವರ್ಷಗಳಲ್ಲಿ ಮಾಡುವ ಕೆಲಸಗಳನ್ನು ಕೇವಲ 5 ವರ್ಷಗಳಲ್ಲಿ ಶಾಸಕರಾಗಿ ಅಭಿವೃದ್ಧಿ ಹರಿಕಾರ ಎಂದರೆ ಎಂ.ಪಿ.ರವೀಂದ್ರ ಆಗಿದ್ದಾರೆ. ಅವರು ಬಾಲ್ಯದಿಂದ ತಮ್ಮನ್ನು ತಾವು ತೊಡಗಿಸಿಕೊಂಡು ವಿದ್ಯಾಭ್ಯಾಸದ ನಂತರ ತಂದೆ ಎಂ.ಪಿ.ಪ್ರಕಾಶ್‍ ಅವರ ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಹಿಂದಿನಿಂದ ಕೆಲಸ ಮಾಡಿದವರು. ತಂದೆಯ ತರುವಾಯ ಸ್ವತಃ ಅನೇಕ ಸಾಂಸ್ಕೃತಿಕ, ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಏಕೈಕ ವ್ಯಕ್ತಿ ರವೀಂದ್ರ. ಸದಾ ಅಭಿವೃದ್ಧಿ ಬಗ್ಗೆ ಚಿಂತನೆ, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಹಾಗೂ ಸಾಂಸ್ಕೃತಿಕವಾಗಿ ತಂದೆಯ ಹಾದಿಯಲ್ಲಿ ರವೀಂದ್ರ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ಇದೆ ವೇಳೆ ಹರಿಹರದ ಶ್ರೀ ಚೈತನ್ಯ ಸಂಗೀತ ಮತ್ತು ನೃತ್ಯ ಕಲಾ ಕೇಂದ್ರದ ಸಂಗೀತ ಕಲಾವಿದರು ಮತ್ತು ನೃತ್ಯ ಕಲಾವಿದರಿಂದ ಗೀತ ನಮನ ಕಾರ್ಯಕ್ರಮ ಜರುಗಿತು.

ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ತಧಾಗತ್, ಗಾಯಿತ್ರಿದೇವಿ, ಮುಖಂಡರಾದ ದಾದಾ ಪೀರ್, ಶಿವರಾಜ, ವಕೀಲ ಸಿದ್ದಲಿಂಗನಗೌಡ, ನರೇಂ ದ್ರ, ಸಾಗರ್ ಪಾಟೀಲ್, ಮನೋಜ್, ಮಂಜುನಾಥ್ ಅಶ್ರಫ್ ಅಲಿ, ಮಂಜುಳಾ, ಹನುಮಕ್ಕ, ಉಪಸ್ಥಿತರಿದ್ದರು.

error: Content is protected !!