ಆಶಾ ಕಾರ್ಯಕರ್ತೆಯರ ಗೌರವ ಧನ 18 ಸಾವಿರ ರೂ. ನಿಗದಿಗೆ ಆಗ್ರಹ

ದಾವಣಗೆರೆ, ಜು.31- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವುದನ್ನು ಕೈಬಿಟ್ಟು, 18 ಸಾವಿರ ರೂಪಾಯಿ ಕನಿಷ್ಟ ವೇತನ ನೀಡುವಂತೆ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯ ಸಮಿತಿ ಅಧ್ಯಕ್ಷ ಕಾಂ. ಹೆಚ್.ಕೆ. ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

ಕೋವಿಡ್ ಬಂದಾಗಿನಿಂದಲೂ ಕಾರ್ಯಕರ್ತೆಯರು ತಮ್ಮ ಮನೆ, ಕುಟುಂಬ ತೊರೆದು ಸಾರ್ವಜನಿಕರ ಸೇವೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಾರ್ಯಕರ್ತೆಯರಿಗೆ 18 ಸಾವಿರ ರೂಪಾಯಿ ಕನಿಷ್ಟ ವೇತನ, ಸರ್ಕಾರಿ ಕೆಲಸ ಖಾಯಂ, ಇಎಸ್ಐ, ಆರೋಗ್ಯ ಭದ್ರತೆ, ವಸತಿ, ಉಚಿತ ಬಸ್‌ ಪಾಸ್, ಇನ್ನಿತರೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದು, ಸರ್ಕಾರಗಳಿಗೆ ಬೇಡಿಕೆ ಪತ್ರವನ್ನು ಸಹ ಸಲ್ಲಿಸಿ ಒತ್ತಾಯಿಸಿದ್ದಾರೆ.

ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾಧ್ಯಕ್ಷ ಆವರಗೆರೆ ವಾಸು, ಮಹ್ಮದ್ ಬಾಷ, ಸವಿತ, ವಿಶಾಲ, ಗೀತಾ, ಮಂಜುಳ, ಷರೀಫ್, ರೇಖಾ ಇನ್ನಿತರರು ಒತ್ತಾಯಿಸಿದ್ದಾರೆ.

error: Content is protected !!