ದಾವಣಗೆರೆ, ಜು. 30- ಕೊರೊನಾ ಸಂಕಷ್ಟದ ನಡುವೆಯೂ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣು, ಹೂ, ಬಾಳೆ ದಿಂಡುಗಳ ಖರೀದಿ ನಡೆಯಿತು. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಖರೀದಿ ಸಂಭ್ರಮ ಅಷ್ಟಾಗಿ ಕಾಣಲಿಲ್ಲ. ಸಮುದಾಯದ ಒಗ್ಗೂಡು ವಿಕೆ ಪ್ರದರ್ಶಿಸುವ ಹಬ್ಬವೆಂದೇ ಹೆಸರಾಗಿರುವ ಈ ಹಬ್ಬದಲ್ಲಿ ನೆರೆಹೊರೆಯವರು, ಸಂಬಂಧಿಗಳು, ಸ್ನೇಹಿತರು, ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವ ಮೂಲಕ ಹಬ್ಬ ಸಂಪನ್ನಗೊಳ್ಳುತ್ತದೆ. ಆದರೆ, ಕೊರೊನಾ ಪರಿಣಾಮ ಒಬ್ಬರ ಮನೆ ಯವರು ಇನ್ನೊಬ್ಬರ ಮನೆಗೆ ಹೋಗಲಾಗುತ್ತಿಲ್ಲ. ಅರಿಶಿನ, ಕುಂಕುಮಕ್ಕೆ ನೆರೆಯವರನ್ನು ಕರೆಯಲೂ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
December 26, 2024