ಡಾ. ವೈ. ನಾಗಪ್ಪನವರು ಜನರೊಂದಿಗೆ ಬೆರೆತು ವೈದ್ಯಕೀಯ ವೃತ್ತಿ ಮಾಡಿದವರು

ಹರಿಹರದ ಐಎಂಎ ಅಧ್ಯಕ್ಷ ಡಾ. ಜೈಪ್ರಕಾಶ್

ಹರಿಹರ,ನ.2- ಡಾ. ವೈ. ನಾಗಪ್ಪ ಅವರು ಸರಳ ಜೀವಿಯಾಗಿದ್ದರು. ಜನರಲ್ಲಿ ಬೆರೆತು ತಮ್ಮ ವೈದ್ಯಕೀಯ ವೃತ್ತಿಯನ್ನು ಮಾಡಿದವರು ಎಂದು ಐಎಂಎ ಸಂಸ್ಥೆಯ ಅಧ್ಯಕ್ಷ ಡಾ. ಜೈಪ್ರಕಾಶ್ ಅವರು ಸ್ಮರಿಸಿದರು.

ನಗರದ ಶ್ರೇಯ ಆಸ್ಪತ್ರೆಯ ಆವರಣದಲ್ಲಿ  ನಿನ್ನೆ ಸಂಜೆ ಏರ್ಪಡಿಸಲಾಗಿದ್ದ ಡಾ. ವೈ. ನಾಗಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಾಗಪ್ಪ ಅವರು ಐಎಂಎ ಸಂಸ್ಥೆಗೆ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವೈದ್ಯರಾಗಿ ಬಡವರಿಗೆ ಅವರು ತುಂಬಾ ಸೇವೆ ಸಲ್ಲಿಸಿದ್ದಾರೆ. ಮಗಳು ಡಾ. ರಶ್ಮಿ ಅವರಿಗೆ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಸಲಹೆ-ಸೂಚನೆ ಗಳನ್ನು ನೀಡುತ್ತಿದ್ದರು. ಅವರಿಗಾಗಿ ಹರಿಹರದಲ್ಲಿ ಶ್ರೇಯ ಆಸ್ಪತ್ರೆಯನ್ನು ನಿರ್ಮಿಸಿದರು ಎಂದು ಹೇಳಿದರು.

ನಾಗಪ್ಪ ಅವರು ವೈದ್ಯಕೀಯ ಸೇವೆಯಲ್ಲಿರುವಾಗಲೇ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದರು. ಶಾಸಕರಾಗಿ ಆಯ್ಕೆಯಾಗಿ, ನಂತರ ಸಚಿವರಾಗಿ ಜನಸೇವೆ ಮಾಡಿ ದರು. ಹರಿಹರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಗಳನ್ನು ಮಾಡಿ, ಜನರ ಮನವನ್ನು ಗೆದ್ದು, ಜನಪ್ರಿಯ ಶಾಸಕ ಎಂಬ ಹೆಸರು ಪಡೆದಿದ್ದರು ಎಂದು ಬಣ್ಣಿಸಿದರು.

ಡಾ. ಆರ್.ಆರ್. ಖಮಿತ್ಕರ್ ಮಾತನಾಡಿ, 
ಡಾ. ನಾಗಪ್ಪ ಅವರು ವೈದ್ಯರಾಗಿ ಬಡವರಿಗೆ, ಅತೀ ಹೆಚ್ಚು ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು ಮತ್ತು ಈ ಕ್ಷೇತ್ರದ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಐಎಂಎ ಸಂಸ್ಥೆಯ ಅಧ್ಯಕ್ಷರಾದ ಸಂದರ್ಭದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಎಂಎ ಸಂಸ್ಥೆಯ ಕಾರ್ಯ ದರ್ಶಿ ಡಾ. ಗೋಪಿ, ಡಾ. ರಶ್ಮಿ, ಡಾ. ರಾಜರಾಮ್, ಡಾ. ಸುರೇಶ್ (ಶುಭೋದಯ), ಡಾ. ನಾಗರಾಜ್, ಡಾ. ಪ್ರವೀಣ್ ಹೆಗಡೆ, ಡಾ. ಕಿರಣ್ ಹೊವಳೆ, ಡಾ. ಅನಂತರಾಜ್, ಶ್ರೇಯ ಆಸ್ಪತ್ರೆಯ ಸಿಬ್ಬಂದಿ ವರ್ಗ  ಮುಂತಾದವರು ಉಪಸ್ಥಿತರಿದ್ದರು.

error: Content is protected !!