ಇಂದು ರಾಣೇಬೆನ್ನೂರು ನಗರಸಭೆ ಚುನಾವಣೆ ಕಾಂಗ್ರೆಸ್ ಬಲ ವೃದ್ಧಿಸಬಹುದೇ ?

ರಾಣೇಬೆನ್ನೂರಿನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಲಿದ್ದು, ನ್ಯಾಯಾಲಯದ ಆದೇಶದಂತೆ ಫಲಿತಾಂಶ  ಮತಪೆಟ್ಟಿಗೆಯಲ್ಲಿಯೇ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

ನಗರಸಭೆಯಲ್ಲಿ ಸಂಸದ, ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕರ ಮತಗಳು ಸೇರಿದಂತೆ  ಒಟ್ಟು 38 ಸದಸ್ಯರಿದ್ದು, ಈ ಮೂವರೂ ಬಿಜೆಪಿಯವರಿದ್ದಾರೆ. ಕೆಪಿಜೆಪಿಯ ಒಬ್ಬರು ಹಾಗೂ ಪಕ್ಷೇತರರೊಬ್ಬರು ಈಗಾಗಲೇ ಬಿಜೆಪಿಗೆ ಬೆಂಬಲಿಸಿದ್ದರಿಂದ   ಆಯ್ಕೆಯಾದ 15 ಸದಸ್ಯರು ಸೇರಿದಂತೆ ಬಿಜೆಪಿ ಬಲ 20ಕ್ಕೆ ಏರಿದ್ದು ಅಧಿಕಾರ ಹಿಡಿಯಲು ಅವಶ್ಯ ಬಲ ಸಿಕ್ಕಂತಾಗಿದೆ.

9 ಸದಸ್ಯರನ್ನು ಹೊಂದಿರುವ  ಕೆಪಿಜೆಪಿಯವರು ಒಂದು ಸ್ಥಾನ ಕೇಳುತ್ತಿದ್ದು, ಈಗಾಗಲೇ ಅಧಿಕಾರ ಹಿಡಿಯುವ ಹಂತ ತಲುಪಿದ್ದರಿಂದ ಕೆಪಿಜೆಪಿಯವರ ಬೇಡಿಕೆಗೆ ಬಿಜೆಪಿ ಸೊಪ್ಪು ಹಾಕುತ್ತಿಲ್ಲವೆಂದು ಹೇಳ ಲಾಗುತ್ತಿದೆ. ಇದುವರೆಗೆ ಬಾಹ್ಯದಲ್ಲಿ ಕೆಪಿಜೆಪಿಯ ಸದಸ್ಯರು ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗೆ ಹಂಚಿ ಹೋಗಿದ್ದು ಕಂಡುಬರುತ್ತಿತ್ತಾದರೂ ಈಗ ಅವರೆಲ್ಲ ಒಂದಡೆ ಸೇರಿದ್ದಾರೆಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿರುವ ಕಾಂಗ್ರೆಸ್ ಸದಸ್ಯರು ತಮ್ಮ ಬಲ ವೃದ್ಧಿಸಬಹುದು ಎನ್ನುವ ಆಸೆಯೊಂದಿಗೆ ನಿನ್ನೆ ಸಂಜೆ   ಕೆ.ಬಿ. ಕೋಳಿವಾಡರ ಮನೆಯಲ್ಲಿ ಸಭೆ ಸೇರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಮಂತ್ರಿಯಾಗುವ ಕನಸಿನಲ್ಲಿರುವ ಕೆಪಿಜೆಪಿ ಸಂಘಟಿಸಿದ್ದ ಎಂ.ಎಲ್.ಸಿ  ಶಂಕರ್, ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾದರೆ ಕಾಂಗ್ರೆಸ್ ಬಲ ಹೆಚ್ಚಬಹುದು. ತಪ್ಪಿದರೆ ಕಾಂಗ್ರೆಸ್ ಯಥಾಸ್ಥಿತಿಯಲ್ಲಿದ್ದು ಅವಿರೋಧ ಆಯ್ಕೆ ತಪ್ಪಿಸ ಬಹುದು  ಎನ್ನುವ ವಿಮರ್ಶೆ ನಗರದಲ್ಲಿ ನಡೆದಿದೆ.‌

error: Content is protected !!